ಅಕ್ರಮ ಸಂಬಂಧ ಗಂಡನಿಗೆ ಗೊತ್ತಾದ ಹಿನ್ನಲೆ: ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ
ಹಾಸನ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಆನಂದ್ ಕುಮಾರ್ (42) ಪತ್ನಿಯಿಂದಲೇ ಕೊಲೆಯಾದ ವ್ಯಕ್ತಿ. ಪತ್ನಿ ಸುನಿತಾಳ ಆರೋಪಿಯಾಗಿದ್ದು, ಈಕೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಪ್ರಕರಣದ ವಿವರ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಾವಲುಹೊಸೂರಿನಲ್ಲಿ ಜ.31ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ಹೊರಟಿದ್ದ ವೇಳೆ ರಸ್ತೆ ಮಧ್ಯೆ ಆನಂದ್ ಕುಮಾರ್‌ನ ಬೈಕ್ ಅಡ್ಡಗಟ್ಟಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ವೇಳೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ಕೈದು ಆಯಾಮಗಳಿಂದ ಆರೋಪಿ ಪತ್ತೆಹಚ್ಚುವಲ್ಲಿ ಹರಸಾಹಸಪಟ್ಟಿದ್ದರು. ಈ ವೇಳೆ, ಅನುಮಾನಗೊಂಡ ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನನಗೆ ಏನು ಗೊತ್ತಿಲ್ಲ ಎಂದು ತಪ್ಪಿಸಿಕೊಂಡಿದ್ದಳು. ಆದರೆ, ತಾಂತ್ರಿಕ ತನಿಖೆಗೊಳಪಡಿಸಿದಾಗ ಈಕೆ ಸತ್ಯ ಬಾಯ್ಬಿಟ್ಟಿದ್ದಾಳೆ.
ಕೋವಿಡ್-19 ನಂತರದ ದಿನಗಳಲ್ಲಿ ಯೋಗ ತರಬೇತಿಗೆ ಸೇರಿದ ಸುನಿತಾ ಯೋಗ ಕ್ಲಾಸ್ ನಲ್ಲಿ ನವೀನ್ ಎಂಬಾತನೊಂದಿಗೆ ಪರಿಚಯ ಮಾಡಿಕೊಂಡಿದ್ದಳು.ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಅನೈತಿಕ ಸಂಬಂಧದ ಇಟ್ಟುಕೊಂಡಿದ್ದರು. ಈ ವಿಚಾರ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಜಗಳ ನಡೆದಿತ್ತು. ಅಕ್ರಮ ಸಂಬಂಧದ ವಿಚಾರ ಗಂಡನಿಗೆ ಗೊತ್ತಾದ ಹಿನ್ನಲೆಯಲ್ಲಿ ಪತಿಯನ್ನು ಮುಗಿಸಬೇಕೆಂದು ಯೋಚಿಸಿ ತನ್ನ ಪ್ರಿಯಕರ ನವೀನ್ ಜೊತೆ ಸೇರಿಕೊಂಡು ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿರುವುದಾಗಿ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಮೂಲಕ ಐದು ದಿನದ ಬಳಿಕ ಕೊಲೆ ಪ್ರಕರಣ ಬೇಧಿಸುವಲ್ಲಿ ಚನ್ನರಾಯಪಟ್ಟಣ ಹಾಗೂ ನುಗ್ಗೆಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಲ್ಲಾಹು ಅಕ್ಬರ್’ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ
ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ
ಸಮಾನತೆ ಕಾಣಬೇಕಾದರೆ ಸರ್ಕಾರಿ ಕಚೇರಿಗಳಲ್ಲಿರುವ ದೇವರ ಫೋಟೋ ಕೂಡ ತೆಗೆಯಿರಿ: ನಟ ಚೇತನ್
ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲಜ್ಜಿ ಇನ್ನಿಲ್ಲ
ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ