ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’! - Mahanayaka

ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!

samrat prithviraj
29/06/2022

ಚಿತ್ರಮಂದಿರಗಳಲ್ಲಿ ಹೀನಾಯ ಸೋಲು ಕಂಡ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಇದೀಗ ಒಟಿಟಿಯಲ್ಲಿಗೆ ಕಾಲಿಡಲು ಮುಂದಾಗಿದೆ. ಜುಲೈ 1ರಂದು ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರವು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿಯೂ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. 200 ಕೋಟಿ ಬಜೆಟ್ ನ ಚಿತ್ರ ಕೇವಲ 70 ಕೋಟಿಗಿಂತಲೂ ಕಡಿಮೆ ಗಳಿಸಿದೆ. ಚಿತ್ರವೂ ಕಳಪೆಯಾಗಿದೆ, ಚಿತ್ರದ ಕಥೆಯನ್ನು ವಾಸ್ತವವಲ್ಲದ ವಿಚಾರಗಳಿಂದ ಕೂಡಿದೆ ಎನ್ನುವ ಆರೋಪಗಳೂ ಚಿತ್ರದ ವಿರುದ್ಧ ಕೇಳಿ ಬಂದಿದೆ.

ಚಿತ್ರದಲ್ಲಿ ಬಲಪಂಥೀಯ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಿರುವ ನಟ, ನಟಿಯರ ಚಿತ್ರಗಳು ಸಾಲು ಸಾಲಾಗಿ ಸೋಲು ಕಾಣುತ್ತಿದ್ದು, ಈ ಹಿಂದೆ ಕಂಗನಾ ರನಾವತ್ ಅವರ ಚಿತ್ರ ಧಾಖಡ್ ಹೀನಾಯ ಸೋಲು ಕಂಡಿತ್ತು. ಈ ಸಾಲಿಗೆ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಕೂಡ ಸೇರಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಕೂಡ ವಾಪಸ್ ತೆಗೆಯಲು ಚಿತ್ರ ತಂಡ ಪರದಾಡುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊನೆಯ ಕ್ಷಣದಲ್ಲೂ ಅಂಗಾಂಗ ದಾನಿಗಳು ಸಿಗಲಿಲ್ಲ: ಖ್ಯಾತ ನಟಿಯ ಪತಿ ನಿಧನ

ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ

ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!

ಹಾಡಹಗಲೇ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!

ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು!

ಇತ್ತೀಚಿನ ಸುದ್ದಿ