ಅಲ್ ಜಝೀರಾ ಕಾರ್ಯನಿರ್ವಹಣೆ ನಿಲ್ಲಿಸಬೇಕು: ಫೆಲೆಸ್ತೀನ್ ಅಥಾರಿಟಿ ಹೇಳಿಕೆ
ಅತಿಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಅಲ್ ಜಝೀರಾ ಚಾನೆಲ್ ನ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಫೆಲೆಸ್ತೀನ್ ಅಥಾರಿಟಿ ಆದೇಶಿಸಿದೆ. ಫೆಲೆಸ್ತೀನಿ ನಲ್ಲಿ ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣವನ್ನು ಮತ್ತು ಕ್ರೌರ್ಯವನ್ನು ಜಗತ್ತಿಗೆ ತಲುಪಿಸುತ್ತಿರುವ ಏಕೈಕ ಚಾನೆಲ್ ನೊಂದಿಗೆ ಮಹ್ಮೂದ್ ಅಬ್ಬಾಸ್ ಅವರ ಫೆಲೆ ಸ್ತೀನ್ ಅಥಾರಿಟಿ ಹೀಗೆ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ವೇಳೆ ಚಾನೆಲ್ ನ ವಿರುದ್ಧ ಇಸ್ರೇಲ್ ಯಾವ ನಿಲುವನ್ನು ತೆಗೆದುಕೊಂಡಿದೆಯೋ ಅದೇ ನಿಲುವನ್ನು ಫೆಲೆ ಸ್ತೀನ್ ಅಥಾರಿಟಿಯ ಈ ನಿಲುವು ಹೋಲುತ್ತದೆ ಮತ್ತು ಇದನ್ನು ಮರು ಪರಿಶೀಲಿಸಬೇಕು ಎಂದು ಅಲ್ ಜಝೀರಾ ಮನವಿ ಮಾಡಿದೆ. ಇದಕ್ಕಿಂತ ಮೊದಲು ಅಲ್ ಜಝೀರ ಚಾನೆಲ್ ಗೆ ಇಸ್ರೇಲ್ ನಿಷೇಧ ವಿಧಿಸಿತ್ತು. ಮತ್ತು ರಮಲ್ಲಾದಲ್ಲಿರುವ ಅದರ ಕಚೇರಿಗೆ ಬೀಗ ಜಡಿಯಲಾಗಿತ್ತು.
ದೇಶದಲ್ಲಿ ಅಶಾಂತಿಯನ್ನು ಉಂಟುಮಾಡುವ ವರದಿಯನ್ನು ಮಾಡುತ್ತಿರುವುದಕ್ಕಾಗಿ ತಾತ್ಕಾಲಿಕ ನಿಷೇಧವನ್ನು ಹೇರುತ್ತಿದ್ದೇವೆ ಎಂದು ಫೆಲಸ್ತೀನ್ ಸುದ್ದಿ ಮಾಧ್ಯಮವಾದ ವಫ ವರದಿ ಮಾಡಿದೆ. ಇದಕ್ಕಿಂತ ಮೊದಲು ಡಿಸೆಂಬರ್ 24ರಂದು ಫೆಲೆಸ್ತೀನಿ ಅಥಾರಿಟಿಯಲ್ಲಿ ಬಹು ಸಂಖ್ಯೆಯಲ್ಲಿರುವ ಫತಹ್ ಪಾರ್ಟಿಯು ಅತಿಕ್ರಮಿತ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ನಿಷೇಧವನ್ನು ಹೇರಿತ್ತು.
ಇದೀಗ ಇಡೀ ಪಶ್ಚಿಮ ದಂಡೆಗೆ ಈ ನಿಷೇಧವನ್ನು ವಿಸ್ತರಿಸಲಾಗಿದೆ. ಇದೇವೇಳೆ ಅಲ್ ಜಝೀರಾ ಈ ತೀರ್ಮಾನಕ್ಕೆ ಕಳವಳ ವ್ಯಕ್ತಪಡಿಸಿದೆ. ರಮಲ್ಲಾದಲ್ಲಿರುವ ಅಲ್ ಜಝೀರಾ ಕಚೇರಿಯನ್ನು ಮುಚ್ಚುವುದಕ್ಕೆ ಇಸ್ರೇಲ್ ಕೈಗೊಂಡ ಕ್ರಮಕ್ಕೆ ಈ ಕ್ರಮ ಸಮಾನವಾಗಿದೆ ಎಂದು ಆರೋಪಿಸಿದೆ. ಶೀಘ್ರ ಈ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೋರಿದೆ. ಫೆಲೆ ಸ್ತೀನ್ ಅಥಾರಿಟಿಯ ಈ ನಿರ್ಧಾರವು ಅತಿಕ್ರಮಿತ ಪಶ್ಚಿಮ ದಂಡೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಜಗತ್ತಿಗೆ ತಿಳಿಸುವುದನ್ನು ತಡೆಯುತ್ತದೆ ಎಂದು ಕೂಡ ಅದು ಆತಂಕ ವ್ಯಕ್ತಪಡಿಸಿದೆ.
ಅಲ್ ಜಝೀರಾದ ಚಟುವಟಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಫೆಲಸ್ತೀನಿ ಅಥಾರಿಟಿಯ ನಿರ್ಧಾರವು ಆಘಾತಕಾರಿ ಎಂದು ಫೆಲೆಸ್ತೀನಿ ನ್ಯಾಷನಲ್ ಇನಿಶಿಯೇಟಿವ್ ಸೆಕ್ರೆಟರಿ ಜನರಲ್ ಮುಸ್ತಫ ಬರ್ಗೂತಿ ಹೇಳಿದ್ದಾರೆ. ಇದು ತಪ್ಪಾದ ನಿರ್ಧಾರವಾಗಿದೆ, ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು.
ಅಥಾರಿಟಿಗೆ ಅಲ್ ಜಝೀರದ ಜೊತೆಗೆ ಏನಾದರೂ ಸಮಸ್ಯೆ ಇದ್ದರೆ ಅದನ್ನು ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು, ಫೆಲೆಸ್ತೀನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಜಗತ್ತಿಗೆ ತಿಳಿಸುವುದು ಮತ್ತು ಫೆಲಸ್ತೀನಿಗಳ ನಿಲ್ಲುವುದು ಅಲ್ ಜಝೀರಾದ ನಿಲುವಾಗಿದೆ ಎಂದವರು ಹೇಳಿದ್ದಾರೆ.ರಮಲ್ಲಾದಲ್ಲಿರುವ ಜಝೀರಾ ಕಚೇರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ನುಗ್ಗಿದ ಇಸ್ರೇಲಿ ಸೈನಿಕರು ಕಚೇರಿಗೆ ಬೀಗ ಜಡಿಯುವಂತೆ ಆದೇಶಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj