ಇಸ್ರೇಲ್ ನಿಂದ ಹಮಾಸ್ ನಾಯಕನ ಹತ್ಯೆ ವಿಚಾರ: ಅಲ್ ಜಝೀರಾದಲ್ಲಿ ಭಯಾನಕ ದೃಶ್ಯ ಬಿಡುಗಡೆ

ಇಸ್ರೇಲ್ ಯೋಧರಿಂದ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರ ಇನ್ನಷ್ಟು ದೃಶ್ಯಗಳು ಬಿಡುಗಡೆಗೊಂಡಿವೆ. ಈ ದೃಶ್ಯಗಳನ್ನು ಅಲ್ ಜಝೀರ ಚಾನೆಲ್ ಬಿಡುಗಡೆಗೊಳಿಸಿದ್ದು ಯುದ್ಧ ಭೂಮಿಯಲ್ಲಿ ಸಿನ್ವಾರ್ ನಡೆಯುತ್ತಿರುವ ದೃಶ್ಯಗಳು ಇವಾಗಿವೆ. ಸೇನಾ ವಸ್ತ್ರವನ್ನು ಧರಿಸಿ ಊರುಗೋಲನ್ನು ಉಪಯೋಗಿಸಿ ಯುದ್ಧ ಭೂಮಿಯಲ್ಲಿ ನಡೆಯುತ್ತಿರುವುದನ್ನು ಈ ದೃಶ್ಯಗಳು ತೋರಿಸುತ್ತವೆ. ಗುರುತು ಗೊತ್ತಾಗದಿರುವುದಕ್ಕಾಗಿ ಅವರು ಮೈಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರುವುದು ಕೂಡ ಕಾಣಿಸುತ್ತಿದೆ.
ಇನ್ನೊಂದು ದೃಶ್ಯದಲ್ಲಿ ಯಹ್ಯಾ ಸಿನ್ವಾರ್ ಅವರಂತೆ ಟೀ ಶರ್ಟ್ ಧರಿಸಿ ಅಪಾರ್ಟ್ಮೆಂಟ್ ನಲ್ಲಿ ಇರುವ ದೃಶ್ಯವಿದೆ. ಈ ದೃಶ್ಯದಲ್ಲಿ ಯಹ್ಯಾ ಸಿನ್ವಾರ್ ಜೊತೆ ಇನ್ನೊಬ್ಬರು ಕಾಣಿಸುತ್ತಾರೆ. ರಫದ ಸುಲ್ತಾನ್ ಬೆಟಾಲಿಯನ್ ಕಮಾಂಡರ್ ಮಹಮದ್ ಹಂದ ಅವರು ಸಿನ್ಮಾರ್ ಜೊತೆ ಇರುವುದು ದೃಶ್ಯದಲ್ಲಿ ಕಾಣಿಸುತ್ತಿದೆ. ಅಲ್ಲದೆ ಇಸ್ರೇಲಿ ಟ್ಯಾಂಕರ್ ಮತ್ತು ಯೋಧರನ್ನು ಸಿನ್ವಾರ್ ನೋಡಿ ನಿಲ್ಲುವುದು ಕೂಡ ಈ ದೃಶ್ಯದಲ್ಲಿದೆ. ರಕ್ತ ಹರಿಯುತ್ತಿರುವ ಪ್ರತಿ ಹಸ್ತಗಳು ಸ್ವಾತಂತ್ರ್ಯದ ಬಾಗಿಲುಗಳನ್ನು ತೆರೆಯಲಿದೆ ಎಂದು ಸಿನ್ವಾರ್ ಕ್ಯಾಮರಾವನ್ನು ನೋಡಿ ಹೇಳುವುದು ದೃಶ್ಯದಲ್ಲಿ ಕೇಳಿಸುತ್ತಿದೆ.
ಹಾಗೆಯೇ 2023 ಅಕ್ಟೋಬರ್ 7ರಂದು ಬೆಳಿಗ್ಗೆ ಆರು ಮೂವತ್ತರ ಸಮಯದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸುವುದಕ್ಕೆ ತನ್ನ ಸಹಿಯೊಂದಿಗೆ ಅನುಮತಿ ನೀಡುವ ದಾಖಲೆಗಳು ಬಿಡುಗಡೆಗೊಂಡಿವೆ.. 2024 ಅಕ್ಟೋಬರ್ 16ರಂದು ಶನಿವಾರ ಅವರ ಹತ್ಯೆ ನಡೆದಿತ್ತು. ರಫಾ ದಲ್ಲಿ ಕುಸಿದು ಬಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಹತ್ಯೆ ನಡೆದಿತ್ತು. ಕಳೆದ ವಾರಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ನಡೆದ ಬಳಿಕ ಸಿನ್ವರ್ ಅವರು ಹತ್ಯೆಗೀಡಾದ ಅಪಾರ್ಟ್ಮೆಂಟಿಗೆ ಜನರು ಬಾರಿ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆಎಂದು ವರದಿಯಾಗಿದೆ. ಇದರ ಬಳಿಕ ಸಿನ್ವಾರ್ ಅವರ ಇನ್ನಷ್ಟು ದೃಶ್ಯಗಳು ಇದೀಗ ಹೊರಬಿದ್ದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj