ಆಳ ಸಮುದ್ರದಲ್ಲಿ ಮುಳುಗಿದ 10 ಜನರಿದ್ದ ಬೋಟ್!
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮದ್ರ ಬೋಟ್ ಮಂಗಳೂರು ಸಮೀಪ ಸಮುದ್ರ ಮಧ್ಯೆ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 10 ಮಂದಿ ತಮಿಳುನಾಡಿನ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆಯ ಮಹೇಶ್ ಕುಂದರ್ ಎಂಬವರಿಗೆ ಸೇರಿದ ಮಕರಧ್ವಜ ಹೆಸರಿನ ಆಳಸಮುದ್ರ ಬೋಟು ಆ.17ರಂದು ಸಂಜೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಆ.23ರಂದು ಸಂಜೆ ಮಂಗಳೂರಿನಿಂದ ನೇರ 11 ನಾಟಿಕಲ್ ಮೈಲು ಆಳ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಜೋರಾದ ಗಾಳಿ ಮಳೆಗೆ ಬೋಟಿನ ಎಂಜಿನ್ ರೂಮಿಗೆ ನೀರು ತುಂಬಿ ಎಂಜಿನ್ ಕೆಟ್ಟು ಹೋಯಿತ್ತೆಂದು ಹೇಳಲಾಗಿದೆ.
ಇದರ ಪರಿಣಾಮ ನೀರು ತುಂಬಿ ಬೋಟು ಸಮುದ್ರ ಮಧ್ಯೆ ಸಂಪೂರ್ಣ ಮುಳುಗಡೆಗೊಂಡಿತು. ತಕ್ಷಣವೇ ಸಮೀಪದಲ್ಲಿದ್ದ ಮಾನ್ವಿತನ್ವಿತ್ ಎಂಬ ಹೆಸರಿನ ಬೋಟಿನವರು ಮುಳುಗಡೆ ಆಗುತ್ತಿದ್ದ ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಿದರು. ಮುಳುಗಡೆಯಾದ ಬೋಟಿನಲ್ಲಿದ್ದ ಹಿಡಿದ ಮೀನು, ಬಲೆ, ಎಂಜಿನ್ ಸೇರಿ ಸುಮಾರು 60 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka