ಅಯ್ಯೋ: ತಂದೆ ಲಾರಿಯನ್ನು ರಿವರ್ಸ್ ತೆಗೆಯೋ ವೇಳೆ ಡಿಕ್ಕಿ ಹೊಡೆದು ಮಗು ಸಾವು
ತೆಲಂಗಾಣದಲ್ಲಿ ಹೃದಯವನ್ನು ತಲ್ಲಣಗೊಳಿಸುವ ಅಪಘಾತವೊಂದು ನಡೆದಿದೆ. ಮೂರು ವರ್ಷದ ಮಗು ತನ್ನ ತಂದೆ ಚಲಾಯಿಸುತ್ತಿದ್ದ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದೆ. ಕೃಷ್ಣ ಎಂಬ ಆ ತಂದೆ ಲಾರಿ ಚಲಾಯಿಸಲು ಹೊರಟಾಗ ಮಗು ಮರದ ಬದಿಯಲ್ಲಿ ನಿಂತಿತ್ತು. ಅದು ಆ ತಂದೆಗೆ ಕಾಣಿಸಿರಲಿಲ್ಲ. ಈ ಮಧ್ಯೆ ಆ ಮಗು ತಂದೆಯ ಬಳಿಗೆ ಓಡಿ ಬಂದಿತ್ತು.
ಈ ಸಂದರ್ಭದಲ್ಲಿ ಮಗುವಿಗೆ ಡಿಕ್ಕಿ ಹೊಡೆದು ಮಗು ಸಾವನ್ನಪ್ಪಿದೆ. ಅಂದಹಾಗೇ ಮೃತ ಮಗುವಿನ ಹೆಸರು ವಿಘ್ನೇಶ್. ಆಂಧ್ರಪ್ರದೇಶದ ಈ ಕುಟುಂಬ ಉದ್ಯೋಗಾರ್ಥವಾಗಿ ಹೈದರಾಬಾದ್ ಗೆ ಬಂದಿತ್ತು.
ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ಮನೆಯಲ್ಲಿ ವಾಹನವನ್ನು ತೆಗೆಯುವಾಗ ಅಥವಾ ವಾಹನ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ನಾಗರಿಕರು ಹೇಳಿದ್ದಾರೆ. ಮಕ್ಕಳು ಹೆತ್ತವರನ್ನು ಕಂಡ ಕೂಡಲೇ ಓಡೋಡಿ ಬರುತ್ತಾರೆ. ಮತ್ತು ಅವರಿಗೆ ಚಾಲನೆಯ ಬಗ್ಗೆ ಜ್ಞಾನ ಇರುವುದಿಲ್ಲ. ಆದ್ದರಿಂದ ಎಲ್ಲಾ ಹೆತ್ತವರು ಈ ಕುರಿತಂತೆ ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth