ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮದ್ಯವ್ಯಸನಿ ತಂದೆ! - Mahanayaka
5:16 AM Thursday 19 - September 2024

ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮದ್ಯವ್ಯಸನಿ ತಂದೆ!

alcohol addict
07/08/2021

ಲುಧಿಯಾನಾ:  ಮದ್ಯ ವ್ಯಸನಿ ತಂದೆಯೋರ್ವ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಪಂಜಾಬ್ ನ ಲುಧಿಯಾನಾ ಜಿಲ್ಲೆಯಲ್ಲಿ ನಡೆದಿದ್ದು. ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾದ ಸಂದರ್ಭದಲ್ಲಿ, ಈ ವಿಚಾರ ಯಾರಿಗಾದರೂ ಹೇಳಿದರೆ, ನಿನ್ನ ಕತ್ತು ಸೀಳಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

ಇನ್ನೂ ಈ ಘಟನೆ ಸಂಬಂಧ 15 ವರ್ಷ ವಯಸ್ಸಿನ ಬಾಲಕಿಯು ತನ್ನ 42 ವರ್ಷ ವಯಸ್ಸಿನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಸುಮಾರು 9 ತಿಂಗಳ ಹಿಂದೆ ತಂದೆಯು ದುಬೈನಿಂದ ಹಿಂದಿರುಗಿದ್ದು, ಆತ ಅಪಫಾತಕ್ಕೀಡಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದ.  ಹೀಗಾಗಿ ಆತ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದ. ಇಡೀ ಮನೆಯ ಜವಾಬ್ದಾರಿಯನ್ನು ತಾಯಿಯೇ ನೋಡಿಕೊಳ್ಳುತ್ತಿದ್ದಳು ಎಂದು ಬಾಲಕಿ ತಿಳಿಸಿದ್ದಾಳೆ.

ಜುಲೈ 12ರಂದು ಸಂಜೆ, ಸಂತ್ರಸ್ತ ಬಾಲಕಿ ತನ್ನ ತಂಗಿ ಮತ್ತು ಸಹೋದರರ ಜೊತೆಗೆ ಒಂದು ಕೋಣೆಯಲ್ಲಿ ಓದುತ್ತಿದ್ದಳು. ಈ ವೇಳೆ ಆಕೆಯನ್ನು ಆರೋಪಿ ತಂದೆ ಕರೆದಿದ್ದು, ಹಸುವಿನ ಕಣ್ಣಿಗೆ ಗಾಯವಾಗಿದ್ದು, ಗಾಯಕ್ಕೆ ಶುಶ್ರೂಷೆ ಮಾಡಬೇಕು ಎಂದು ಹೇಳಿದ್ದಾನೆ. ಹೀಗಾಗಿ ಬಾಲಕಿ ತಂದೆಯ ಜೊತೆಗೆ ತೆರಳಿದ್ದಳು. ಈ ವೇಳೆ ಒಣ ಹುಲ್ಲು ರಾಶಿ ಹಾಕಿದ್ದ ಕೋಣೆಯಿಂದ ಹುಲ್ಲು ತರುವಂತೆ ಬಾಲಕಿಯನ್ನು ತಂದೆ ಕಳುಹಿಸಿದ್ದಾನೆ. ಬಾಲಕಿ ಹುಲ್ಲು ತೆಗೆಯುತ್ತಿದ್ದ ವೇಳೆ ಹಿಂದಿನಿಂದ ಬಂದ ತಂದೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತ ಬಾಲಕಿ ತಂದೆಯಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ಈ ವಿಚಾರವನ್ನು ಯಾರಿಗೂ ಹೇಳದಂತೆ ತಂದೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.


Provided by

ತಂದೆ ನಡೆಸಿದ ಕೃತ್ಯದಿಂದ ಬಾಲಕಿ ತೀವ್ರವಾಗಿ ಖಿನ್ನತೆಗೆ ಜಾರಿದ್ದಳು. ಈ ನಡುವೆ ತಂದೆ ಪದೇ ಪದೇ ಬಾಲಕಿಯನ್ನು ನಿಂದಿಸಲು ಆರಂಭಿಸಿದ್ದನು. ಇದರಿಂದ ನೊಂದ ಬಾಲಕಿ ತನ್ನ ತಾಯಿಗೆ ತಂದೆಯ ದುಷ್ಕೃತ್ಯವನ್ನು ತಿಳಿಸಿದ್ದಾಳೆ. ಆ ಬಳಿಕ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ತಂದೆಯನ್ನು  ಬಂಧಿಸಿ ವಿಚಾರಣೆ ನಡೆಸಿದ್ದು, ವಿವಿಧ ಸೆಕ್ಷನ್ ಗಳಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?

ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ | ಕ್ಷೇತ್ರದ ಜನತೆ ಎದುರು ಶಶಿಕಲಾ ಜೊಲ್ಲೆ ಭಾವುಕ

ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ಇತ್ತೀಚಿನ ಸುದ್ದಿ