ಅಲ್ಲಾಹು ಅಕ್ಬರ್’ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಘೋಷಣೆ
ಚೆನ್ನೈ: ಕಳೆದ ಎರಡು ದಿನಗಳ ಹಿಂದೆ ಮಂಡ್ಯದ ಪಿಇಎಸ್ ಕಾಲೇಜಿನ ಬಳಿ ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳಿದ್ದ ಗುಂಪನ್ನು ಎದುರಿಸಿ, ಧೈರ್ಯ ಪ್ರದರ್ಶಿಸಿರುವ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಗೆ ‘ಫಾತಿಮಾ ಶೇಖ್ ಪ್ರಶಸ್ತಿ’ ನೀಡುವುದಾಗಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಟಿಎಂಎಂಕೆ) ಬುಧವಾರ ಘೋಷಿಸಿದೆ.
ಒಬ್ಬ ಭಾರತೀಯ ಪ್ರಜೆಯಾಗಿ ಆಕೆ ತನ್ನ ಹಕ್ಕನ್ನು ಪ್ರತಿಪಾದನೆ ಮಾಡಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಎಂದೇ ಕರೆಯಲಾಗುವ ಫಾತಿಮಾ ಶೇಖ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಮುಸ್ಕಾನ್‌ಖಾನ್‌ಗೆ ಪ್ರದಾನ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಟಿಎಂಎಂಕೆ ಮುಖಂಡ ಎಂ.ಎಚ್.ಜವಾಹಿರುಲ್ಲಾ ತಿಳಿಸಿದ್ದಾರೆ.
‘ಸಂವಿಧಾನ ಆಕೆಗೆ ನೀಡಿರುವ ಹಕ್ಕನ್ನು ಕಸಿದುಕೊಳ್ಳಲು ಕೇಸರಿ ಪಡೆ ಯತ್ನಿಸಿತ್ತು. ಆಕೆ ಕಾಲೇಜು ಆವರಣ ಪ್ರವೇಶಿಸಿದಾಗ, ಕೆಲವು ವಿದ್ಯಾರ್ಥಿಗಳಿದ್ದ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದೆ. ಆಕೆ ಗುಂಪನ್ನು ನಿರ್ಭೀತಿಯಿಂದ ಎದುರಿಸಿದ್ದಲ್ಲದೇ, ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾಳೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ
ಸಮಾನತೆ ಕಾಣಬೇಕಾದರೆ ಸರ್ಕಾರಿ ಕಚೇರಿಗಳಲ್ಲಿರುವ ದೇವರ ಫೋಟೋ ಕೂಡ ತೆಗೆಯಿರಿ: ನಟ ಚೇತನ್
ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲಜ್ಜಿ ಇನ್ನಿಲ್ಲ
ವಿದೇಶಕ್ಕೆ ಹೋಗುವುದಾಗಿ ಹೇಳಿ, ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ!
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ವಕೀಲ ರಾಜೇಶ್ ಭಟ್ಗೆ ಷರತ್ತುಬದ್ಧ ಜಾಮೀನು