ಇವಿಎಂ ದುರ್ಬಳಕೆ ಆರೋಪ: ನ್ಯೂನ್ಯತೆ ಇಲ್ಲ ಎಂದು ಹೇಳಿದ ಚುನಾವಣಾ ಆಯೋಗ
ವಿದ್ಯುನ್ಮಾನ ಮತಯಂತ್ರ ಇವಿಎಂ ದುರ್ಬಳಕೆ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಮತ್ತೊಮ್ಮೆ ತಳ್ಳಿಹಾಕಿದೆ, ಇವಿಎಂಗಳಲ್ಲಿ ನ್ಯೂನತೆ ಇಲ್ಲ, ಬ್ಯಾಲೆಟ್ ಪೇಪರ್ ಗಳಿಗೆ ಹಿಂತಿರುಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಇವಿಎಂಗಳು ಪದೇ ಪದೇ ನ್ಯಾಯಾಂಗ ಪರಿಶೀಲನೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಮತ್ತು 42 ಪ್ರತ್ಯೇಕ ಸಂದರ್ಭಗಳಲ್ಲಿ ರಾಷ್ಟ್ರದ ಅತ್ಯುನ್ನತ ನ್ಯಾಯಾಲಯಗಳ ಇವಿಎಂಗಳ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿವೆ ಎಂದು ಹೇಳಿದ್ದಾರೆ.
ಇವಿಎಂ ಬಗೆಗಿನ ಆರೋಪಗಳನ್ನು “ಆಧಾರರಹಿತ” ಎಂದು ಹೇಳಿದ ಚುನಾವಣಾ ಆಯುಕ್ತರು ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಯಾವಾಗಲು ಪಾರದರ್ಶಕತೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಇವಿಎಂಗಳನ್ನು ತಿರುಚುವುದು ಅಥವಾ ಹ್ಯಾಕ್ ಮಾಡುವುದು ಅಸಾಧ್ಯ, ಈ ಕರಿತು ಪ್ರತಿಯೊಂದು ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗಿದೆ. ಈ ತಂತ್ರಜ್ಞಾನವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವಗಳನ್ನು ನಿರಂತರವಾಗಿ ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj