ಅಲೋಪಥಿ ವೈದ್ಯರು ಸತ್ತವರನ್ನು ಬದುಕಿದ್ದಾರೆಂದು ಹೇಳಿ ಹಣಪೀಕುವ ರಾಕ್ಷಸರು | ಬಿಜೆಪಿ ಶಾಸಕ
ಉತ್ತರಪ್ರದೇಶ: ಅಲೋಪಥಿ ವೈದ್ಯರು ರಾಕ್ಷಸರು ಎಂದು ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯ ಬಿಜೆಪಿ ಶಾಸಕ ಇದೀಗ ಅಲೋಪಥಿ ವೈದ್ಯರ ವಿರುದ್ಧ ಹೇಳಿಕೆ ನೀಡಿದ್ದು, ಬಾಬಾ ರಾಮ್ ದೇವ್ ಹೇಳಿಕೆಯನ್ನು ಸಮರ್ಥಿಸಿ ಅವರು ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಬಾಲಿಯಾದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈ ಹೇಳಿಕೆ ನೀಡಿದ್ದು, ಅಲೋಪಥಿ ವೈದ್ಯರು ಸತ್ತ ರೋಗಿಗಳು ಬದುಕಿದ್ದಾರೆ ಎಂದು ಹೇಳಿ ಹಣವನ್ನ ಪೀಕುವ ಮೂಲಕ ರಾಕ್ಷಸರಾಗಿ ಬದಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಾಬಾ ರಾಮ್ ದೇವ್ ವಾದವನ್ನ ನಾನು ಬೆಂಬಲಿಸುತ್ತೇನೆ. ಅವರು ವೈದ್ಯಕೀಯ ವ್ಯವಸ್ಥೆಯನ್ನೇ ದೂಷಿಸಿಲ್ಲ. ಬದಲಾಗಿ ಪ್ರಾಚೀನ ಕಾಲದ ಆರ್ಯುವೇದ ಪದ್ಧತಿಯನ್ನ ಉತ್ತೇಜಿಸುತ್ತಿದ್ದಾರೆ. ಹೀಗಾಗಿ ಅವರ ವಾದವನ್ನ ನಾವೆಲ್ಲ ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ.
ಅಲೋಪಥಿ ವೈದ್ಯರು 100 ರೂಪಾಯಿಗಳಿಗೆ 10 ರೂಪಾಯಿಯ ಮಾತ್ರೆಯನ್ನು ಮಾರಾಟ ಮಾಡುವವರು ಅವರು ಸಮಾಜ ಸ್ನೇಹಿಯಾಗಲು ಎಂದಿಗೂ ಸಾಧ್ಯವಿಲ್ಲ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಎರಡನೇ ಪೋಸ್ಟ್ ಹಾಕಿರುವ ಅವರು, ಅಲೋಪಥಿ ಕೂಡ ಉಪಯುಕ್ತವಾಗಿದೆ. ಆದರೆ ಆಯುರ್ವೇದವು ಇದಕ್ಕಿಂತ ಕಡಿಮೆ ಅಲ್ಲ ಎಂದು ಅವರು ಹೇಳಿದ್ದಾರೆ.