ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ - Mahanayaka

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

shreenath poojary
25/10/2021

ಸಿಂದಗಿ:  ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವ ಬಿಜೆಪಿ, ಕಾಂಗ್ರೆಸ್‌ ನ ಷಡ್ಯಂತ್ರಕ್ಕೆ ಮಾಜಿ ಸಚಿವ ಜಮೀರ್‌ ಅಹ್ಮದ್ ಖಾನ್ ಅವರನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ, ಜಮೀರ್‌ ಅಹ್ಮದ್ ಖಾನ್ ಹೆಗಲಿಗೆ ಬಂದೂಕು ಇರಿಸಿ ಸಿಂದಗಿ ಭಾಗದಲ್ಲಿ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಹೆಣೆಯಲಾಗಿದೆ, ಜಮೀರ್ ಅಹ್ಮದ್ ಈ ಹುನ್ನಾರದ ಪಾಲುದಾರರಾಗಬಾರದು ಎಂದು ಯುವ ಧುರೀಣ ಹಾಗೂ ನ್ಯಾಯವಾದಿ ಶ್ರೀನಾಥ್ ಪೂಜಾರಿ ಹೇಳಿದರು.


Provided by

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಲ್ಪಸಂಖ್ಯಾತರನ್ನೇ ಸೋಲಿಸಲು ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್ ಖಾನ್ ಅವರನ್ನು ಕಾಂಗ್ರೆಸ್ ದಾಳವಾಗಿ ಬಳಸಿಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವ ಜಮೀರ್‌ ಅಹ್ಮದ್ ಅವರು ಅಲ್ಪಸಂಖ್ಯಾತರಿಗಾಗಿ ಶಾಸಕ ಜಮೀರ್‌ ಅಹ್ಮದ್ ಮಾಡಿರುವ ಕೊಡುಗೆ ಏನು ಎಂಬುದು ಮೊದಲು ಬಹಿರಂಗಪಡಿಸಲಿ ಎಂದು ಶ್ರೀನಾಥ್ ಪೂಜಾರಿ ಸವಾಲು ಹಾಕಿದರು.

ಜಮೀರ್ ಅಹ್ಮದ್ ಸಮಾಜಕ್ಕೆ ಎಷ್ಟು ನಾಲಾಯಕ್ ಕೆಲಸ ಮಾಡಿದ್ದೀರಿ ಎನ್ನುವುದನ್ನು ನಾವು ಬಹಿರಂಗಪಡಿಸುತ್ತೇವೆ, ಆರೆಸ್ಸೆಸ್ ಬಗ್ಗೆ ನಿನಗೆ ಇಷ್ಟೊಂದು ತಿಳಿದಿದ್ದರೆ, ಕಾಂಗ್ರೆಸ್ ನ ಈಗಿನ ಅಭ್ಯರ್ಥಿ ಅಶೋಕ ಮನಗೂಳಿ ಆರೆಸ್ಸೆಸ್ ಕಾರ್ಯಕರ್ತ ಎಂದು ನಿನಗೆ ತಿಳಿದಿರಲಿಲ್ಲವೇ?, ಕಾಂಗ್ರೆಸ್ ನ ಆರೆಸ್ಸೆಸ್ ಅಭ್ಯರ್ಥಿಗಾಗಿ ಅಲ್ಪಸಂಖ್ಯಾತರ ಮತ ಕೇಳಲು ನಿನಗೆ ಯಾವ ನೈತಿಕತೆ ಇದೆ ಎಂದು ಶ್ರೀನಾಥ್ ಪೂಜಾರಿ ಪ್ರಶ್ನಿಸಿದರು.


Provided by

ಜಮೀರ್ ಅಹ್ಮದ್ ಒಬ್ಬ ಹಾಸ್ಯ ಕಲಾವಿದರ ಹಾಗೆ ಹಾವಭಾವ ಮಾಡುತ್ತಾ ಸಿಂದಗಿ ಮತಕ್ಷೇತ್ರದ ಜನರನ್ನು ಜೋಕರ್ ತರಹ ರಂಜಿಸುತ್ತಿದ್ದಾರೆ. ಪ್ರಭುದ್ದತೆ ಇಲ್ಲದ ಚಿಕ್ಕ ಮಕ್ಕಳ ತರಹ ವರ್ತಿಸುತ್ತಿರುವುದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಾಜಿಯಾ ಅಂಗಡಿ ಅವರನ್ನು ಬೆಂಬಲಿಸುತ್ತಿದ್ದೇವೆ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಪ್ರತೀಕವಾಗಿಯೇ ನಾಜಿಯಾ ಅಂಗಡಿ ಕಣಕ್ಕಿಳಿದಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಿಂದ ಹಿಂದುಳಿದ ವರ್ಗಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಬೇಕಾಗಿದೆ, ಹೀಗಾಗಿ ಎಲ್ಲ ಸಮುದಾಯಗಳ ಪ್ರತೀಕವಾಗಿ ನಾಜಿಯಾ ಅಂಗಡಿ ಚುನಾವಣಾ ಕಣದಲ್ಲಿದ್ದಾರೆ ಎಂದರು.

ಆದರೆ ಜಮೀರ್‌ಅಹ್ಮದ್ ಹಾಗೂ ಇತರ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರು ತನ್ನದೇ ಸಮುದಾಯದ  ಸಹೋದರಿಯನ್ನು ಸೋಲಿಸಲು ಹಗಲಿರುಳು ಶ್ರಮಿಸುತ್ತಿರುವುದು ನೋಡಿದರೆ ಜಮೀರ್‌ ಅಹ್ಮದ್ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದಂತೆ ತೋರುತ್ತದೆ, ಅಲ್ಪಸಂಖ್ಯಾತ ಸಮುದಾಯವನ್ನು ರಾಜಕೀಯವಾಗಿ ದಮನ ಮಾಡುವ ಷಡ್ಯಂತ್ರಕ್ಕೆ ಜಮೀರ್‌ ಅಹ್ಮದ್ ಸಹ ಪಾಲುದಾರರಾಗಬಾರದು ಎಂದು ಪೂಜಾರಿ ಹೇಳಿದರು. ಈ ಸಂದರ್ಭದಲ್ಲಿ ಹಾಲು ಮತ ಸಮುದಾಯ ನಾಯಕರಾದ ಪ್ರಕಾಶ ಹಿರೆಕುರುಬರ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ತುಂಬಿ ತುಳುಕುತ್ತಿದ್ದ ಬಸ್ ಗೆ ಹತ್ತಿದ ಸಿಎಂನ್ನು ಕಂಡು ಪ್ರಯಾಣಿಕರಿಗೆ ಅಚ್ಚರಿ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ಅಕ್ಟೋಬರ್ 25ರಂದು ಮಂಗಳೂರಿನಲ್ಲಿ ‘ಸಂವಿಧಾನ ದೀಕ್ಷೆ’ ಕಾರ್ಯಕ್ರಮ

ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ

ಇತ್ತೀಚಿನ ಸುದ್ದಿ