ಕಾರಿನೊಳಗೆ ನುಗ್ಗಿದ ಅಲ್ಯುಮಿನಿಯಂ ಪಟ್ಟಿಗಳು: ಭೀಕರ ದೃಶ್ಯ ನೋಡಿ ಬೆಚ್ಚಿಬಿದ್ದ ಜನ
ಚಲಿಸುತ್ತಿದ್ದ ಕಾರಿನೊಳಗೆ ಅಲ್ಯೂಮಿನಿಯಂ ಪಟ್ಟಿಗಳು ಹೊಕ್ಕು ಕಾರು ಚಾಲಕ ಪವಾಡ ಸದೃಶ್ಯವಾಗಿ ಪಾರಾದ ಘಟನೆ ಮಂಗಳೂರು ನಗರದ ನಂತೂರು ಜಂಕ್ಷನ್‌ನಲ್ಲಿ ನಡೆದಿದೆ.
ಅಲ್ಯೂಮಿನಿಯಂ ಪಟ್ಟಿ ಕೊಂಡೊಯ್ಯುತ್ತಿದ್ದ ಪಿಕಪ್ ವಾಹನ ಸಡನ್ ಬ್ರೇಕ್ ಹಾಕಿದ ಪರಿಣಾಮ ಅಲ್ಯುಮಿನಿಯಂ ಪಟ್ಟಿಗಳು ಹಿಂದೆ ಬರುತ್ತಿದ್ದ ಕಾರಿನೊಳಗೆ ನುಗ್ಗಿವೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅವರು ಪವಾಡ ಸದೃಶ್ಯವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕೆಪಿಟಿ ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಪಿಕಪ್ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರು. ಅವರೂ ಬ್ರೇಕ್ ಹಾಕಿದಾಗ ಆ ವಾಹನದಲ್ಲಿದ್ದ ಅಲ್ಯುಮಿನಿಯಂ ಪಟ್ಟಿಗಳು ಏಕಾಏಕಿ ಜಾರಿ ಹೋಗಿ ಕಾರಿನೊಳಗೆ ತೂರಿಹೋಗಿದ್ದವು. ಸ್ಥಳಕ್ಕೆ ಕದ್ರಿ ಪೊಲೀಸರು ಸ್ಥಳಕ್ಕೆ ತರಳಿ ಪರಿಶೀಲನೆ ನಡೆಸಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw