ಹಳೆ ವಿದ್ಯಾರ್ಥಿ ಸಂಘ ಕರಂಬಾರು: ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಶೂ, ಬೆಲ್ಟ್ ವಿತರಣೆ
ಬಜಪೆ: ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಅಪಾರವಾಗಿದೆ. ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ಕೊಡುವುದರ ಜೊತೆಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ವಿವಿಧ ಪರಿಕರಗಳನ್ನು ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ, ಎಂದು SDMC ಅಧ್ಯಕ್ಷ ರಾಘವೇಂದ್ರ ಎಸ್. ಹೇಳಿದರು.
ಅವರು ಹಳೆ ವಿದ್ಯಾರ್ಥಿ ಸಂಘ ಕರಂಬಾರು ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಶೂ ಹಾಗೂ ಬೆಲ್ಟ್ ಗಳನ್ನು ವಿತರಿಸಿ ಮಾತನಾಡಿದರು.
ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಶಂಕರ್ ಶೆಟ್ಟಿ ಗಂಡೋಟ್ಟು, ಉಮೇಶ್ ಅಮೀನ್, ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು SdMc ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಮಾರು 2 ಲಕ್ಷ ಮೌಲ್ಯದ ಉಚಿತ ಸಮವಸ್ತ್ರ, ಶೂ, ಹಾಗೂ ಬೆಲ್ಟ್ ನ್ನು ವಿತರಿಸಲಾಯಿತು. ಗೀತಾ ಎಸ್, ಸ್ವಾಗತಿಸಿದರು, ಮಾಲಾಶ್ರೀ ನಿರೂಪಿಸಿ, ಉಷಾ M. ವಂದಿಸಿದರು.