11:39 AM Wednesday 12 - March 2025

ವಸ್ತ್ರ ವಿನ್ಯಾಸಕಿಗೆ ಸಿಹಿ ತಿಂಡಿಯಲ್ಲಿ ಅಮಲು ಪದಾರ್ಥ ನೀಡಿ ಅತ್ಯಾಚಾರ

stop
11/05/2021

ಲಾತೂರ್:  ವಸ್ತ್ರ ವಿನ್ಯಾಸಕಿಯೋಬ್ಬರಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿ ಆರೋಪಿ  ಬ್ಲ್ಯಾಕ್ ಮೇಲ್ ನಡೆಸಿದ್ದಾನೆ.

ಮೂನಾಮೂಲದ ವಸ್ತ್ರ ವಿನ್ಯಾಸಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು,  ದೆಹಲಿ  ಮೂಲದ ವ್ಯಕ್ತಿ ಅತ್ಯಾಚಾರ ಆರೋಪಿಯಾಗಿದ್ದು, ಈತನ ಜೊತೆ ಇನ್ನಿಬ್ಬರು ದೆಹಲಿ ಮೂಲದ ವ್ಯಕ್ತಿಗಳು ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದು, ಸಂತ್ರಸ್ತೆಯನ್ನು ಈ ಮೂವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಲಾತೂರ್ ಮೂಲದ ಸಂತ್ರಸ್ಥೆ ಲಾತೂರ್‍ ನಲ್ಲಿ ಕಂಪ್ಯೂಟರ್ ಸಾಫ್ಟ್‍ವೇರ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದು ಇದರ ಜತೆಗೆ ಫ್ಯಾಷನ್ ಡಿಸೈನರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಕಳೆದ ಫೆ.26 ರಂದು 28 ವರ್ಷದ ಯುವಕ ಹೋಟೆಲ್ ಒಂದರಲ್ಲಿ ನನಗೆ ಬಲವಂತದಿಂದ ಡ್ರಗ್ಸ್ ಮಿಶ್ರಣ ಮಾಡಿದ್ದ ಸಿಹಿ ತಿನಿಸಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ತನ್ನ ಸಹಚರರ ಜೊತೆಗೆ ಸೇರಿಕೊಂಡು ಈ ಕೃತ್ಯ ನಡೆಸಿದ್ದಾನೆ.

ಸಂತ್ರಸ್ಥೆಗೆ ನಾನು ದೆಹಲಿ ಹೈಕೋರ್ಟ್ ವಕೀಲ ಎಂದು ಪರಿಚಯಿಸಿಕೊಂಡು ಆಕೆಯನ್ನು ಸೈಡ್ ಸೀನ್ ವೀಕ್ಷಣೆಗೆ ಆಹ್ವಾನಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

ಇತ್ತೀಚಿನ ಸುದ್ದಿ

Exit mobile version