ಅಂಬಾರಿ ಉತ್ಸವ ಸ್ಲೀಪರ್ ಬಸ್ ಬಿಡುಗಡೆ: ಎಲ್ಲೆಲ್ಲಿ ಸಂಚರಿಸಲಿದೆ ಈ ಬಸ್? | ಏನಿದರ ವಿಶೇಷತೆ! - Mahanayaka
9:25 AM Thursday 12 - December 2024

ಅಂಬಾರಿ ಉತ್ಸವ ಸ್ಲೀಪರ್ ಬಸ್ ಬಿಡುಗಡೆ: ಎಲ್ಲೆಲ್ಲಿ ಸಂಚರಿಸಲಿದೆ ಈ ಬಸ್? | ಏನಿದರ ವಿಶೇಷತೆ!

ambari uthsava
21/02/2023

ಕರಾರಸಾ ನಿಗಮವು ಸೇರ್ಪಡೆಗೊಳಿಸುವ 50 ವೋಲ್ವೋ ಸ್ಲೀಪರ್ ವಾಹನಗಳ ಪೈಕಿ ಮೊದಲ ಹಂತವಾಗಿ ಇಂದು 15 “ಅಂಬಾರಿ ಉತ್ಸವ” ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆಗೆ ಬಿಡುಗಡೆ ಮಾಡಿದೆ.

ವಿಧಾನಸೌಧದ  ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕರಾರಸಾ ನಿಗಮದ ವೋಲ್ವೋ ಬಿಸ್-VI 9600s ಮಾದರಿಯ ಮಲ್ಟಿ ಆಕ್ಸಲ್ “ಅಂಬಾರಿ ಉತ್ಸವ” ಸ್ಲೀಪರ್ ವಾಹನಗಳನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಶಾಸಕರು, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಮತ್ತು ಅಧ್ಯಕ್ಷರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರವರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ ದಿನ 8,000 ಅನುಸೂಚಿಗಳಿಂದ 28 ಲಕ್ಷ ಕಿ.ಮೀ. ಕ್ರಮಿಸುವುದರ ಮೂಲಕ 28 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದ್ದು, ಇದರಲ್ಲಿ ಶೇ.17 ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಕಲ್ಪಿಸಲಾಗುತ್ತಿದೆ. ನಿಗಮವು ಪ್ರತಿ ದಿನ ರೂ.10 ಕೋಟಿ ಆದಾಯಗಳಿಸುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವೋಲ್ವೋ ಬಿಎಸ್-VI 9600s ಮಾದರಿಯ ಮಲ್ಟಿ ಆಕ್ಸಲ್ ಸ್ಲೀಪರ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಸ್ವೀಕರಿಸಿದ ಹೆಸರುಗಳ ಮೂಲಕ “ಅಂಬಾರಿ ಉತ್ಸವ” ಎಂಬ ಬ್ರ್ಯಾಂಡ್ ಹೆಸರು ಮತ್ತು “ಸಂಭ್ರಮದ ಪ್ರಯಾಣ” ಎಂಬ ಟ್ಯಾಗ್ ಲೈನ್ ನೀಡಿದೆ .

ಈ “ಅಂಬಾರಿ ಉತ್ಸವ” ವಾಹನಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ:

ಬೆಂಗಳೂರು                –-          ಸಿಕಂದ್ರಬಾದ್

ಬೆಂಗಳೂರು                –-          ಹೈದ್ರಾಬಾದ್

ಬೆಂಗಳೂರು                –-          ಎರ್ನಾಕುಲಂ

ಬೆಂಗಳೂರು                –-          ತಿರುವನಂತಪುರಂ

ಬೆಂಗಳೂರು                –-          ತ್ರಿಚೂರು

ಬೆಂಗಳೂರು                –-          ಪಣಜಿ

ಕುಂದಾಪುರ                —           ಬೆಂಗಳೂರು

ಮಂಗಳೂರು             —          ಪೂನಾ

ಈ ವಾಹನವು 15 ಮೀಟರ್ ಉದ್ದವಿದ್ದು ಕೆಳಕಂಡ ಪ್ರಮುಖ ವಿಶಿಷ್ಟತೆಗಳನ್ನು ಹೊಂದಿರುತ್ತದೆ:

40 ಆಸನಗಳು 2×1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಮಲಗುವ ಮತ್ತು ಕುಳಿತುಕೊಳ್ಳುವ ಸ್ಥಾನದಲ್ಲಿ ಬೆಸ್ಟ್-ಇನ್-ಕ್ಲಾಸ್ ಹೆಡ್ ರೂಮ್ ಜೊತೆಗೆ ಉನ್ನತ ಪ್ರಯಾಣದ ಅನುಭವವನ್ನು ನೀಡುತ್ತದೆ.

KSRTC ವೋಲ್ವೋ-9600s ವಾಹನವು ಸುರಕ್ಷಿತ, ಪರಿಸರ ಕಾಳಜಿ ಹಾಗೂ ಗುಣಮಟ್ಟವನ್ನು ಒಳಗೊಂಡ ಬಲಿಷ್ಠ ಸ್ಕ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿರುವ ವಾಹನವಾಗಿದೆ.

KSRTC ವೋಲ್ವೋ-9600s ಮಾದರಿಯ ವಾಹನದ ಮುಂಭಾಗವು ಏರೋಡೈನಾಮಿಕ್ ಮೇರುಕೃತಿಯ ಭಾಗವಾಗಿದೆ, ವೇಗದ ಕಾರ್ಯಾಚರಣೆಗಳಲ್ಲಿ ಗಾಳಿಯ ಎಳೆತವನ್ನು ಕಡಿಮೆ ಮಾಡಲು ಪೂರಕವಾಗಿ, ಇಂಧನದ ಉಳಿತಾಯಕ್ಕೆ ಕಾರಣವಾಗುತ್ತದೆ.

ಹೊಸದಾಗಿ ವಿನ್ಯಾಸಗೊಳಿಸಿದ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ KSRTC ವೋಲ್ವೋ-9600s ವಾಹನವು ಪ್ರಯಾಣಿಕರಿಗೆ ವಿಹಂಗಮ ನೋಟದ ವೈಭವವನ್ನು ನೀಡುತ್ತದೆ.

ವಾಹನವು ಉತ್ತಮ ಕಾರ್ಯಕ್ಷಮತೆ ಜೊತೆಗೆ ಐಷಾರಾಮಿ ಗುಣಗಳನ್ನು ಹೊಂದಿದ್ದು, ವಾಹನದ ಹೊರಭಾಗದ ಭವ್ಯತೆಗೆ V-ಆಕಾರದ ಹೆಡ್-ಲೈಟ್ಗಳು ವಿಶಿಷ್ಟವಾದ ಸೊಬಗನ್ನು ನೀಡುತ್ತದೆ.

ಹೊಸ ಸುಧಾರಿತ PX ಸಸ್ಪೆನ್ಶನ್ ಸ್ಟೀರಿಂಗ್ ಸ್ಥಿರತೆ ಮತ್ತು ನಿರ್ವಹಣೆಯನ್ನು ಹೊಂದಿದ್ದು ಇದು ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ.

ಎಬಿಎಸ್, ಎಂಜಿನ್ ಬ್ರೇಕ್, ಹಿಲ್ ಸ್ಟಾರ್ಟ್ ನೆರವು, ಇಂಟಿಗ್ರೇಟೆಡ್ ಹೈಡ್ರೊಡೈನಾಮಿಕ್ ರಿಟಾರ್ಡರ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ಇವಿಎಸ್ಸಿ) ಸೇರಿದಂತೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಈ ವಾಹನವು ಹೊಂದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಸಿಬ್ಬಂದಿ ವರ್ಗದವರ ಕಲ್ಯಾಣಕ್ಕಾಗಿ  ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಿಗಮವು ಆಂತರಿಕವಾಗಿ ತನ್ನ ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಗಾರಗಳಲ್ಲಿಯೇ ಹಳೆಯ 250ಕ್ಕೂ ಹೆಚ್ಚು ವಾಹನಗಳನ್ನು ಆಂತರಿಕ ಸಂಪನ್ಮೂಲಗಳಿಂದಲೇ ನವೀಕರಣಗೊಳಿಸಿ ಕಾರ್ಯಚರಣೆಗೊಳಿಸುತ್ತಿದೆ.

ಗ್ರಾಮಾಂತರ ಪ್ರದೇಶದ ಪ್ರಯಾಣಿಕರು ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಸದುದ್ದೇಶದಿಂದ 600 ಹೊಸ ಕರ್ನಾಟಕ ಸಾರಿಗೆ ಮಾದರಿಯ ವಾಹನಗಳನ್ನು ಮೂರು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ.

ಅಂತರ ನಗರಗಳ ನಡುವೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಈಗಾಗಲೇ 01 Prototype ವಾಹನವು ಯಶಸ್ವಿ ಕಾರ್ಯಾಚರಣೆಗೊಳಿಸಿದ್ದು, ಮಾರ್ಚಿ-2023 ರೊಳಗಾಗಿ 50 ವಿದ್ಯುತ್‌ ಚಾಲಿತ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು.

ರಾಜ್ಯದ ಎಲ್ಲಾ ನಗರಗಳ ನಡುವೆ ಸುಸಜ್ಜಿತ ಸಾರಿಗೆ ಸೌಲಭ್ಯವನ್ನು ಕಲ್ಲಿಸುವ ಉದ್ದೇಶದಿಂದ ಹಂತ – ಹಂತವಾಗಿ 350 ವಿದ್ಯುತ್‌ ವಾಹನಗಳನ್ನು ನಿಗಮದಿಂದ  ಸೇರ್ಪಡೆಗೊಳಿಸುವ ಯೋಜನೆಯಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ