ಒಡೆಯನ ಹಾದಿ ಹಿಡಿದ ಕನ್ವರ್ | ಅಂಬರೀಶ್ ಅವರ ಮುದ್ದಿನ ನಾಯಿ ಸಾವು

24/05/2021
ಸಿನಿಡೆಸ್ಕ್ : ರೆಬೆಲ್ ಸ್ಟಾರ್ ಅಂಬರೀಶ್ ಅವರ ಮುದ್ದಿನ ನಾಯಿ ಕನ್ವರ್ ಸೋಮವಾರ ಕೊನೆಯುಸಿರೆಳೆದಿದ್ದು, ಅಂಬರೀಶ್ ಅವರನ್ನು ಕಳೆದುಕೊಂಡ ಬಳಿಕ ತೀವ್ರವಾಗಿ ನೊಂದಿದ್ದ ಪುಟ್ಟ ಜೀವ ಇದೀಗ ಕೊನೆಯುಸಿರೆಳೆದಿದೆ.
ಅಂಬರೀಶ್ ಅವರ “ಅಂತ” ಚಿತ್ರದಲ್ಲಿ ಅವರ ಹೆಸರು ಕನ್ವರ್ ಎಂದಾಗಿತ್ತು. ಇದೇ ಹೆಸರನ್ನು ಅವರು ತಮ್ಮ ಪ್ರೀತಿಯ ನಾಯಿಗೆ ಇಟ್ಟಿದ್ದರು. ಅಂಬರೀಶ್ ಜೊತೆಗೆ ವಾಕಿಂಗ್ ಗೆ ನಿತ್ಯ ತೆರಳುತ್ತಿದ್ದ ಕನ್ವರ್ ಅವರ ನಿಧನದ ಬಳಿಕ ತೀವ್ರವಾಗಿ ಮಂಕಾಗಿತ್ತು.
ಸರಿಯಾಗಿ ಊಟ ತಿಂಡಿಯನ್ನು ಸೇವಿಸದೇ ಕನ್ವರ್ ಒಬ್ಬಂಟಿಯಾಗಿಯೇ ಹೆಚ್ಚು ಕಾಲ ಕಳೆದಿದೆ. ಅಂಬರೀಶ್ ಅವರು ಎಲ್ಲಿ ಹೋದರೂ ಅವರನ್ನು ಹಿಂಬಾಳಿಸಿ ಹೋಗುತ್ತಿದ್ದ ಕನ್ವರ್ ಇದೀಗ ಅಂಬರೀಶ್ ಅವರನ್ನು ತನ್ನ ಸಾವಿನೊಂದಿಗೆ ಹಿಂಬಾಳಿಸಿ ಪ್ರಯಣಿಸಿದೆ.
ಸೈಂಟ್ ಬರ್ನಾಡ್ ತಳಿಯ ಕನ್ವರ್, ಅಂಬರೀಶ್ ಅವರನ್ನು ಕಳೆದುಕೊಂಡು ಎರಡೂವರೆ ವರ್ಷಗಳ ವರೆಗೂ ತೀವ್ರ ದುಃಖದೊಂದಿಗೆ ಬದುಕಿತ್ತು. ಅಂಬರೀಶ್ ಅವರು ಇರವಾಗ ಏ ಕನ್ವರ್… ಬರೋ ಇಲ್ಲಿ ಎಂದು ಕರೆಯುತ್ತಿದ್ದರು.