ಅಂಬೇಡ್ಕರ್ ಕುರಿತಾದ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ: ಒಟ್ಟು 6 ಲಕ್ಷ ಬಹುಮಾನ ಘೋಷಣೆ
ವಿಜಯಪುರ : ನಾಡಿನ ವಿದ್ಯಾರ್ಥಿ ಯುವಜನರಲ್ಲಿ ಅಂಬೇಡ್ಕರ್ ಅವರ ವಿಚಾರಗಳನ್ನು ಬಿತ್ತುವ ಕಾರ್ಯಮಾಡುತ್ತಿರವ ದಲಿತ ವಿದ್ಯಾರ್ಥಿ ಪರಿಷತ್ತಿನ ಕೆಲಸ ನಿಜಕ್ಕೂ ಶ್ಲಾಘನೀಯ ಆಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರಾಮನಗೌಡ ಕನ್ನೊಳ್ಳಿ ಹೇಳಿದರು.
ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಚಾರ್ಥ ಆಗಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ ಅವರು, ರಾಜ್ಯದಲ್ಲಿ ಶೋಷಿತ ವರ್ಗದ ವಿದ್ಯಾರ್ಥಿಗಳಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪರಿಷತ್ತಿನ ಈ ಕಾರ್ಯ ಮುಂದಿನ ದಿನಗಳಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿಯಾಗಲಿದೆ ಎಂದರು.
ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿ ಯುವಜನರು ಈ ಪರಿಕ್ಷೆಗಾಗಿ ನೊಂದಣಿ ಮಾಡಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅಧ್ಯಯನ ಮಾಡಿ ಉತ್ತಮ ರ್ಯಾಂಕ್ ಪಡೆದು ಈ ನಗದು ಬಹುಮಾನಗಳಿಗೆ ಬಾಜನರಾಗಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಪರಿಷತ್ ಮೂಲಕ ಹಮ್ಮಿಕೊಳ್ಳಲಾದ ಈ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಥಮ ಬಹುಮಾನ 3 ಲಕ್ಷ, ದ್ವಿತೀಯ ಬಹುಮಾನ 2 ಲಕ್ಷ ಹಾಗೂ ತೃತೀಯ ಬಹುಮಾನ 1 ಲಕ್ಷ ನೀಡಲಾಗುತ್ತಿದೆ.
ಮತ್ತು 100 ವಿದ್ಯಾರ್ಥಿಗಳಿಗೆ ರಾಜ್ಯದ ಪ್ರತಿಷ್ಠಿತ ಸ್ಪರ್ಧಾ ತರಬೇತಿ ಕೇಂದ್ರಗಳಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ವಿಧ್ಯಾರ್ಥಿ ಮತ್ತು ಯುವಜನರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನಾಡಿನ ಗೌರವಾನ್ವಿತರ ಸಮ್ಮುಖದಲ್ಲಿ ಗೌರವಿಸಲಾಗುವದು. ಪರೀಕ್ಷೆಯಲ್ಲಿ ಭಾಗವಹಿಸುವ ವಿಧ್ಯಾರ್ಥಿ, ಯುವಜನರು www.thedvp.org ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಪರಿಷತ್ ಮುಖಂಡರಾದ ಅಕ್ಷಯ್ ಹಾಜಿಮನಿ ಹೇಳಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನಗರ ಘಟಕ ಸಂಚಾಲಕ ಆನಂದ ಮುದೂರ, ಸುರೇಶ ಹೊಸಮನಿ, ಕಾಶೀನಾಥ ಕಟ್ಟಿಮನಿ, ಸುರೇಶ ರಾಠೋಡ್, ಹನಮಂತ ಛಲವಾದಿ ಮುಂತಾದವರು ಭಾಗಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ್ದಾರೆ: ಅರವಿಂದ್ ಕೇಜ್ರಿವಾಲ್
2022-23ರ ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಯಾವಾಗ ಶಾಲೆ ಆರಂಭ?
ನನ್ನನ್ನು ಜೈಲಿಗೆ ಕಳಿಸಬೇಕು ಅನ್ಕೊಂಡಿದ್ರು; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ
ಕಲ್ಲು ಸಕ್ಕರೆ ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳು ಮಾಯ!
ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರು ಇಡಲು ನಿರ್ಧಾರ: ಸಿಎಂ ಬೊಮ್ಮಾಯಿ