ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಖದೀಮರ ಬಂಧನ | ಕೃತ್ಯದ ಹಿಂದಿನ ಉದ್ದೇಶ ಬಯಲು
ವಿಜಯಪುರ: ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದುರುದ್ದೇಶದಿಂದ ಅಂಬೇಡ್ಕರ್ ಫೋಟೋಗೆ ಅವಮಾನ ಮಾಡಿದ ಇಬ್ಬರನ್ನು ಇಂಡಿ ಪೊಲೀಸರು ಬಂಧಿಸಿದ್ದಾರೆ.
35 ವರ್ಷ ವಯಸ್ಸಿನ ಶರಣಬಸಪ್ಪ ಗಣಪತಿ ಹರಿಜನ್ ಹಾಗೂ 34 ವರ್ಷ ವಯಸ್ಸಿನ ದೇವರಮನಿ ಬಂಧಿತ ಆರೋಪಿಗಳಾಗಿದ್ದಾರೆ. ಫೆ.8ರಂದು ಇಂಡಿ ತಾಲೂಕಿನ ಮಾರ್ಸನಳ್ಳಿಯಲ್ಲಿ ಅಂಬೇಡ್ಕರ್ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಿಸಲಾಗಿತ್ತು.
ಫೆ.9ರಂದು ಅರ್ಜುಣಗಿ ಬಿ.ಕೆ,ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಈ ಸಂದರ್ಭ ಮಾರ್ಸನಳ್ಳಿ ಗ್ರಾಮದ ಶಿವಮ್ಮ ಮಾದರ ಅಧ್ಯಕ್ಷೆಯಾಗುತ್ತಾಳೆ ಎಂಬ ಹೊಟ್ಟೆ ಕಿಚ್ಚಿನಿಂದ ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ.
ಫೆ.8ರಂದು ರಾತ್ರಿ 1ಕ್ಕೆ ಆರೋಪಿಗಳು ಅಂಬೇಡ್ಕರ್ ಭಾವ ಚಿತ್ರಕ್ಕೆ ಹಾರ ಹಾಕಿದ್ದು, ಚುನಾವಣೆ ನಿಲ್ಲಿಸಲು ಯತ್ನಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೇಶ ಕಂಡ ಮಹಾನಾಯಕನ ಭಾವ ಚಿತ್ರಕ್ಕೆ ಅವಮಾನ ಮಾಡುವ ಮೂಲಕ ಆರೋಪಿಗಳು ತಮ್ಮ ಸಣ್ಣತನ ತೋರಿಸಿದ್ದಾರೆ ಎಂದು ವ್ಯಾಪಕ ಆಕ್ರೋಶ ಇದೀಗ ವ್ಯಕ್ತವಾಗಿದೆ.