ಅಂಬೇಡ್ಕರ್ ಅವರ ಕುಟುಂಬದಲ್ಲಿ ಎಷ್ಟು ಯೋಧರು ಇದ್ದರು? | ಮಾಲೋಜಿ ಸಕ್ಪಾಲ್ ಎಂದರೆ ಯಾರು ಗೊತ್ತೇ?
ಮಹಾಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ಮಹಾನಾಯಕ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ಧಾರಾವಾಹಿಯಲ್ಲಿ ಭೀಮ್ ರಾವ್ ಅಂಬೇಡ್ಕರ್ ಅವರ ತಂದೆ ಸೇನೆಯಲ್ಲಿದ್ದರು ಎನ್ನುವುದನ್ನು ನೀವು ಈಗಾಲೇ ನೋಡಿ ತಿಳಿದುಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಅವರ ಕುಟುಂಬಕ್ಕೂ ಸೇನೆಗೂ ಯಾವ ರೀತಿಯ ಸಂಬಂಧ ಇದೆ ಗೊತ್ತಾ?
ಅಂಬೇಡ್ಕರ್ ಅವರ ತಾತ ಮಾಲೋಜಿ ಸಕ್ಪಾಲ್ ಅವರು ಕೂಡ ಸೇನೆಯಲ್ಲಿ ಕೆಲಸ ಮಾಡಿದ್ದರು. ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಬಾಂಬೆ ಸೇನೆಯಲ್ಲಿ ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ತಮ್ಮ ಸೇವಾ ಕಾಲದಲ್ಲಿ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು. ರಾಮ್ ಜಿ ಸಕ್ಪಾನ್ ಮತ್ತು ಮೀರಾ ಸಕ್ಪಾಲ್.
ಇನ್ನೂ ಇವರ ತಂದೆ ಹಾಗೂ 6 ಜನ ಚಿಕ್ಕಪ್ಪಂದಿರು ಸೈನ್ಯದಲ್ಲಿ ಸುಬೇದಾರ್ ಆಗಿ ಕೆಲಸ ಮಾಡಿದ್ದಾರೆ. ಅಂತೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುಟುಂಬಕ್ಕೂ ಸೈನ್ಯದ ಸಂಬಂಧ ಅಂತೂ ಇದ್ದೇ ಇತ್ತು. ರಾಮ್ ಜಿ ಸಕ್ಪಾಲ್ ಅವರು ಭೀಮಾಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರಾಗಿದ್ದಾರೆ.
ಅಂಬೇಡ್ಕರ್ ಅವರು ರಾಮ್ ಜಿ ಸಕ್ಪಾಲ್ ಹಾಗೂ ಭೀಮಾಬಾಯಿಯ ಕೊನೆಯ ಮಗನಾಗಿದ್ದಾರೆ. ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಅಂಬೇಡ್ಕರ್ ಅವರ ಸಹೋದರ, ಸಹೋದರಿಯರಾಗಿದ್ದಾರೆ. ಅಂಬೇಡ್ಕರ್ ಅವರಿಗೆ 2 ವರ್ಷ ಇದ್ದಾಗ ರಾಮ್ ಜಿ ಸಕ್ಪಾಲ್ ಸೇನೆಯಿಂದ ನಿವೃತ್ತರಾಗಿದ್ದರು. ಬಳಿಕ 14 ವರ್ಷ ಸೇನೆಯ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿದ್ದರು.