ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ - Mahanayaka
1:05 PM Wednesday 5 - February 2025

ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ

ramesh kumar
03/10/2021

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯು ಮತಾಂತರ ನಿರ್ಬಂಧದ ಹೆಸರಿನಲ್ಲಿ ಸದ್ಯ ನಡೆಸುತ್ತಿರುವ ಹೈಡ್ರಾಮಾದ ವಿರುದ್ಧ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇವರು ಅಂಬೇಡ್ಕರ್ ಅವರಿಗಿಂತಲೂ ದೊಡ್ಡವರಾ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಅವರು ಏನು ಹೇಳಿದರು,  “ಹಿಂದೂ ಧರ್ಮದಲ್ಲಿ ಹುಟ್ಟುವುದನ್ನು ತಪ್ಪಿಸಲು ನನಗೆ ಸಾಧ್ಯವಿಲ್ಲ. ಆದರೆ ಹಿಂದೂವಾಗಿ ನಾನು ಸಾಯೋದಿಲ್ಲ” ಎಂದು ಹೇಳಿದ್ರು ಅದಕ್ಕೆ ಇವರು(ಬಿಜೆಪಿ) ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ನಾನು ಬೌದ್ಧ ಅನುಯಾಯಿಯಾಗಿ ಸಾಯುತ್ತೇನೆ ಎಂದು ಅಂಬೇಡ್ಕರ್ ಹೇಳಿದರು. ಅದಕ್ಕೆ ಇವರು ಏನು ಹೇಳ್ತಾರೆ? ಅಂಬೇಡ್ಕರ್ ಅವರಿಗಿಂತ ಮಹಾನುಭವರು ಬೇಕಾ ನಿಮಗೆ ಈ ದೇಶದಲ್ಲಿ? ಆ ಮತ(ಹಿಂದೂ ಧರ್ಮ) ಬೇಡ ಎಂದು ಅವರು(ಅಂಬೇಡ್ಕರ್) ಹೇಳಬೇಕಾದರೆ, ಅವರಿಗೆ ಎಷ್ಟು ನೋವಾಗಿರಬೇಕು ಅದಕ್ಕೆ ನೀವು ಉತ್ತರ ಹುಡುಕಿದ್ದೀರಾ? ಅವರಿಗೆ ಆಗಿದ್ದ ದುಃಖಕ್ಕೆ ನಿಮ್ಮ ಬಳಿ ಏನಾದರೂ ಸಮಾಧಾನ ನಿಮ್ಮ ಬಳಿ ಇದೆಯಾ? ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.

ಶೆಡ್ಯೂಲ್ಡ್ ಕಾಸ್ಟ್(ಪರಿಶಿಷ್ಟ ಜಾತಿ)  ಅಸ್ಪೃಶ್ಯತೆಯಿಂದ ನರಳುತ್ತಿರುವವರಿಗೆ ವಿಮುಕ್ತಿ ಸಿಗಲಿ. ಯಾರು ಭಾರತೀಯ ಬಡತನದಲ್ಲಿದ್ದಾನೆ ಅವನಿಗೆ ಸಮಾನತೆ ಸಿಗಲಿ ಅಂತ ಇಲ್ಲೇ ಮದರಸದಲ್ಲಿ ಪಬ್ಲಿಕ್ ಮೀಟಿಂಗ್ ನಲ್ಲಿ ಅವರು ಮಾತನಾಡಿದ್ದು. ಅವರಿಗಿಂತ ದೊಡ್ಡವರ ಇವರೆಲ್ಲ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಧರ್ಮ ಮುಖ್ಯ. ಬಸವಣ್ಣ ಏನು ಹೇಳಿದ್ರು? ಮನುಸ್ಮೃತಿ ಯಾಕೆ ಸುಟ್ರು? ಮನುಸ್ಮೃತಿಯನ್ನು ಸುಟ್ಟವರು ಯಾರು? ನಾವು, ನೀವು ಸುಟ್ವಾ ಮನುಸ್ಮೃತಿಯನ್ನು? ಹಿಂದೂ ಕೋಡ್ ಬಿಲ್ ಪಾರ್ಲಿಮೆಂಟ್ ನಲ್ಲಿ ಪ್ರವೇಶ ಇತ್ತವರು ಯಾರು? ಹೆಣ್ಣಿಗೆ ಅಸಮಾನತೆ ಇಲ್ವಾ ಇಲ್ಲಿ? ಯಾರು ಯಾರಿಗೆ ಯಾವ ಮತ ಇಷ್ಟ ಇದೆಯೋ ಅದಕ್ಕೆ ಅವರು ಹೋಗ್ತಾರೆ. ಅದನ್ನು ನಿರ್ಬಂಧಿಸಲು ಆಗುತ್ತಾ? ಎಂದು ರಮೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಹಿಂದೂಗಳಿಗೆ ಅಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ | ಕೆ.ಎಸ್‌.ಈಶ್ವರಪ್ಪ ಆರೋಪ

ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!

ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್

ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ ‘ಜೈ ಭೀಮ್’ ಬಹುನಿರೀಕ್ಷಿತ ಚಿತ್ರ

ವಾಹನ ಚಲಾಯಿಸುತ್ತಿರುವ ವೇಳೆ ಹೆಡ್ ಫೋನ್, ಬ್ಲೂಟೂತ್ ಬಳಸಿದರೆ ದಂಡ ಖಚಿತ

ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ

ಇತ್ತೀಚಿನ ಸುದ್ದಿ