ಅಂಬೇಡ್ಕರ್ ಜಯಂತಿ ಪ್ರಯುಕ್ತ ಕನ್ನಡ ಸ್ಟೇಟಸ್ ಗಳು - Mahanayaka
9:25 PM Thursday 12 - December 2024

ಅಂಬೇಡ್ಕರ್ ಜಯಂತಿ ಪ್ರಯುಕ್ತ ಕನ್ನಡ ಸ್ಟೇಟಸ್ ಗಳು

ambedkar jayanti
14/04/2022

ಸಂವಿಧಾನ ಶಿಲ್ಪಿ, ಪರಮಪೂಜ್ಯ ಡಾ.ಬಾಬಾ ಸಾಹೇಬ್  ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಸ್ಟೇಟಸ್ ಗಳನ್ನು ಇಲ್ಲಿ ನೀಡಲಾಗಿದೆ…

*ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಭಾರತೀಯರ ನೆಮ್ಮದಿಯ ಬದುಕಿನ ನಂಬಿಕೆಗಳು ಹುಟ್ಟಿದ ದಿನ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಅಂಬೇಡ್ಕರ್ ಅವರು ಸಮಾನತೆ ಮತ್ತು ಬ್ರಾತೃತ್ವದಲ್ಲಿ ದೃಢ ನಂಬಿಕೆ ಹೊಂದಿದ್ದರು. ಅವರ ವಿಚಾರಗಳನ್ನು ಅನುಸರಿಸಿಕೊಂಡು ಹೋಗೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ದಬ್ಬಾಳಿಕೆಯ ವಿರುದ್ಧ ಹೋರಾಡಿದ ಮತ್ತು ಸಮಾನತೆಯ ಮಹತ್ವವನ್ನು ಬೋಧಿಸಿದ ವಿಶ್ವದ ಶ್ರೇಷ್ಟ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು, ಅವರಿಂದ ಪ್ರೇರಣೆ ಪಡೆದು ದೇಶದ ಪ್ರಗತಿಗೆ ಸಹಕರಿಸೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಅಂಬೇಡ್ಕರ್ ಜಯಂತಿಯ ಈ ದಿನವು ಆತ್ಮ ವಿಶ್ವಾಸ, ವ್ಯಕ್ತಿ ನಿಷ್ಠತೆ ಮತ್ತು ದಬ್ಬಾಳಿಕೆಯ ಪ್ರತಿರೋಧದ ಮನೋಭಾವದೊಂದಿಗೆ ನಮಗೆ ಗೌರವಯುತವಾಗಿ ಬದುಕಲು ಮಾರ್ಗದರ್ಶನವಾಗಲಿ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಶಿಕ್ಷಣದ ಮಹತ್ವ ಅರಿಯಲು, ಸಮಾಜ ಸುಧಾರಣೆಯ ಕನಸನ್ನು ನನಸು ಮಾಡಲು, ಸಮಾನತೆಯ ರಾಷ್ಟ್ರ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಬೋಧನೆಗಳನ್ನು, ಮಾರ್ಗದರ್ಶನಗಳನ್ನು ಅನುಸರಿಸೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಸಮಾನತೆಯ ಗುರಿ ಸಾಧಿಸುವ ಗುರಿಯೊಂದಿಗೆ ಈ ಬಾರಿಯ ಅಂಬೇಡ್ಕರ್ ಜಯಂತಿಯನ್ನು ಆಚರಿಸೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಜೀವನವು ಪ್ರತಿ ಕ್ಷಣದಲ್ಲೂ ಸವಾಲು ಒಡ್ಡುತ್ತದೆ. ಅಂಬೇಡ್ಕರ್ ಅವರಂತಹ ವೀರರು ಮಾತ್ರವೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಸವಾಲುಗಳನ್ನು ಸ್ವೀಕರಿಸಿ ಗೆಲ್ಲುತ್ತಾರೆ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

*ಸಾರ್ಥಕ ಜೀವನ ನಡೆಸಿ, ಸಮಾಜದ ಬೆಳವಣಿಗೆಗೆ ಕೊಡುಗೆ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ನಾಯಕರನ್ನು ಪಡೆದ ನಾವೇ ಧನ್ಯರು. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ