“ಪ್ರಾಣ ಹೋದರೂ ಪರವಾಗಿಲ್ಲ ಅಂಬೇಡ್ಕರ್ ಜಯಂತಿ ಅದ್ಧೂರಿಯಾಗಿ ಆಚರಿಸುತ್ತೇವೆ” - Mahanayaka
10:26 PM Tuesday 4 - February 2025

“ಪ್ರಾಣ ಹೋದರೂ ಪರವಾಗಿಲ್ಲ ಅಂಬೇಡ್ಕರ್ ಜಯಂತಿ ಅದ್ಧೂರಿಯಾಗಿ ಆಚರಿಸುತ್ತೇವೆ”

ambedkar jayanti
02/04/2021

ಬೆಂಗಳೂರು: ದೇಶಕ್ಕೆ ಸಂವಿಧಾನವನ್ನು ನೀಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅದ್ದೂರಿ ಆಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಖ್ಯಾತೆ ತೆಗೆದಿದ್ದು, ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನರ ಮೇಲೆ ಒತ್ತಡ ಹೇರಿದ್ದಾರೆ.

ರಾಜ್ಯ ಸರ್ಕಾರವು ಹೋಳಿ ಹಬ್ಬ ಮುಗಿದ ಬಳಿಕ ಕೋವಿಡ್ ಮಾರ್ಗ ಸೂಚಿಗಳನ್ನು ಜಾರಿ ಮಾಡಿದೆ. ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೆ ಮೊದಲಾದ ಇತರ ಧರ್ಮೀಯರ ಆಚರಣೆ ಸರ್ಕಾರದ ಒಳಗಿರುವ ಮನುವಾದಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.

ಏ. 5ರಂದು ಡಾ.ಬಾಬು ಜಗಜೀವನರಾಂ ಜಯಂತಿ ಹಾಗೂ 14ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಕೊವಿಡ್ ಮಾರ್ಗ ಸೂಚಿಗಳನ್ನು ಹಾಕಿದೆ. ಸಿನಿಮಾ ಮಂದಿರ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಜನ ಗುಂಪುಗೂಡುತ್ತಿದ್ದಾರೆ. ಸರ್ಕಾರದ ಕೊವಿಡ್ ಮಾರ್ಗ ಸೂಚಿಗಳಿಗೆ ಗೌರವ ನೀಡಿ ಕಳೆದ ಬಾರಿ  ಕೂಡ ಅಂಬೇಡ್ಕರ್ ಜಯಂತಿ ನಡೆಸಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ಎಲ್ಲ ಹಬ್ಬಗಳಿಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಅಂಬೇಡ್ಕರ್ ಜಯಂತಿ ಆಚರಣೆಯನ್ನು ತಡೆಯಲು ಮುಂದಾಗಿದೆ ಎಂದು ವಿವಿಧ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕಲಬುರ್ಗಿಯಲ್ಲಿ ಇದೀಗ ಅಂಬೇಡ್ಕರ್ ವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಂಬೇಡ್ಕರ್ ಜಯಂತಿ ಆಚರಣೆಯಿಂದ ಜೀವ ಹೋಗುತ್ತದೆ ಎಂದಾದರೆ ಹೋಗಲಿ ಎಂದು ಕಲಬುರ್ಗಿಯ ದಲಿತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸಭೆ, ಚುನಾವಣಾ ಪ್ರಚಾರ ಮಾಡಲು ನಿಮಗೇನೂ ತೊಂದರೆ ಆಗುವುದಿಲ್ಲ. ಆದರೆ, ಅಂಬೇಡ್ಕರ್‌ ಜಯಂತಿಯನ್ನು ಉದ್ದೇಶಪೂರ್ವಕವಾಗಿ ತಡೆಯುತ್ತಿದ್ದೀರಿ. ಪ್ರತಿ ಬಾರಿ ಏಪ್ರಿಲ್‌, ಮೇ ತಿಂಗಳಲ್ಲಿ ಸರ್ಕಾರಗಳು ಈ ನಾಟಕ ಶುರು ಮಾಡುತ್ತಿವೆ’ ಎಂದು ಮುಖಂಡ ಪ್ರಕಾಶ ಮೂಲಭಾರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಹಾತ್ಮರ ಜಯಂತಿಗಳನ್ನು ಜಿಲ್ಲಾಡಳಿತವೇ ಸಂಕ್ಷಿಪ್ತವಾಗಿ ಆಚರಿಸುತ್ತದೆ. ಇದಕ್ಕಾಗಿ ಇರುವ ಜಯಂತಿ ಉತ್ಸವ ಸಮಿತಿಯಲ್ಲಿ ಅಧಿಕಾರಿಗಳು, ಮುಖಂಡರು ಇದ್ದಾರೆ. ಅವರು ತೆಗೆದುಕೊಂಡ ನಿರ್ಣಯದಂತೆ ನಾವು ಕಾನೂನು ಪಾಲನೆ ಮಾಡಬೇಕಾಗುತ್ತದೆ. ತ‍ಪ್ಪು ತಿಳಿವಳಿಕೆಯಿಂದ ಅದ್ಧೂರಿ ಕಾರ್ಯಕ್ರಮ ಮಾಡಿ, ಸೋಂಕು ವ್ಯಾಪಿಸಿದರೆ ಅದಕ್ಕೆ ನೀವೇ ಕಾರಣರಾಗುತ್ತೀರಿ’ ಎಂದು ಡಿಸಿಪಿ ಕಿಶೋರ ಬಾಬು ಎಚ್ಚರಿಕೆ ನೀಡಿದ್ದಾರೆ. ಆದರೆ ದಲಿತ ಸಂಘಟನೆಗಳು, ಈ ಬಾರಿ ಅಂಬೇಡ್ಕರ್ ಜಯಂತಿ ಆಚರಣೆಯನ್ನು ನಾವು ಅದ್ದೂರಿಯಾಗಿಯೇ ಮಾಡುತ್ತೇವೆ. ನಮ್ಮ ಪ್ರಾಣ ಹೋದರೂ ಪರವಾಗಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RBI ಸ್ಥಾಪನೆಗೆ ಕಾರಣಕರ್ತರಾದ ಡಾ.ಅಂಬೇಡ್ಕರ್-ರಘೋತ್ತಮ ಹೊ.ಬ

ಮಹಿಳೆಯರ ಹಕ್ಕುಗಳ ರಕ್ಷಕ: ಬಾಬಾಸಾಹೇಬ್ ಡಾ.ಅಂಬೇಡ್ಕರ್

ಬಾಬಾಸಾಹೇಬ್ ಅಂಬೇಡ್ಕರ್ ರ ವಿಜ್ಞಾನದ ಜ್ಞಾನ -ರಘೋತ್ತಮ ಹೊಬ

ಇತ್ತೀಚಿನ ಸುದ್ದಿ