ಅಂಬೇಡ್ಕರ್, ಕುವೆಂಪು ವೃತ್ತ ವಿವಾದ: ಮೈಸೂರಿನ ಮಾತೃ ಮಂಡಳಿ ವೃತ್ತ ನೆಲಸಮ - Mahanayaka

ಅಂಬೇಡ್ಕರ್, ಕುವೆಂಪು ವೃತ್ತ ವಿವಾದ: ಮೈಸೂರಿನ ಮಾತೃ ಮಂಡಳಿ ವೃತ್ತ ನೆಲಸಮ

mathru mandali vrutha
31/12/2021

ಮೈಸೂರು: ಮೈಸೂರು ಮಾತೃ ಮಂಡಳಿ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಕುವೆಂಪು ವೃತ್ತ ಮಾಡಬೇಕು ಎನ್ನುವ ಎರಡು ಭಿನ್ನ ಹೋರಾಟಗಳ ಮಧ್ಯೆಯೇ  ಇಂದು ಬೆಳ್ಳಂ ಬೆಳಗ್ಗೆ ವೃತ್ತವನ್ನು  ಮೈಸೂರು ಪಾಲಿಕೆ ಧ್ವಂಸಗೊಳಿಸಿದೆ.

ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಮಾತೃ ಮಂಡಳಿ ವೃತ್ತವನ್ನು ತೆರವುಗೊಳಿಸಲಾಗಿದೆ.  ವೃತ್ತ ತೆರವು ಖಂಡಿಸಿ, ತಡೆಯಲು ಬಂದ ಕೆಲವು ಮುಖಂಡರನ್ನು  ಈ ವೇಳೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮಾತೃ ಮಂಡಳಿ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಭಾರೀ ಒತ್ತಾಯ ಕೇಳಿ ಬಂದಿತ್ತು. ಈ ನಡುವೆ ಕುವೆಂಪು ವೃತ್ತ ಎಂದು ನಾಮಕರಣ ಮಾಡಬೇಕು ಎಂದೂ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ನಿರಂತರ ಹೋರಾಟ ನಡೆಯುತ್ತಿತ್ತು.

ನಿನ್ನೆ ಎರಡೂ ಪ್ರತಿಭಟನಾ ತಂಡಗಳು ಕೂಡ, ಅಂಬೇಡ್ಕರ್ ವೃತ್ತ ಮತ್ತು ಕುವೆಂಪು ವೃತ್ತ ಎಂದು ಫ್ಲೆಕ್ಸ್ ಹಾಕುವ ವಿಚಾರಕ್ಕೆ ಪರಸ್ಪರ ವಾಗ್ವಾದ ನಡೆದಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣ ನೀಡಿ ಮೈಸೂರು ಪಾಲಿಕೆಯು ವೃತ್ತವನ್ನೇ ಧ್ವಂಸಗೊಳಿಸಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಳೆ ಕರ್ನಾಟಕ ಬಂದ್ ಇದೆಯಾ?  | ಸಿಎಂ ಜೊತೆಗೆ ಕನ್ನಡ ಪರ ಸಂಘಟನೆ ಸಭೆ 

ಕಾಂಗ್ರೆಸ್ ಗೆ ಮದುವೆಯಾಗಿ 25 ವರ್ಷದ ಬಳಿಕ ಗಂಡು ಮಗು ಹುಟ್ಟಿದ ಸಂಭ್ರಮ | ಈಶ್ವರಪ್ಪ

ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಮುಖಭಂಗ

ಅಪ್ಪೆ ಸಾಲೊದ ಪನ್ನಿ/ ಬಂಗಾಡಿಗೆ ಪ್ರಯಾಣ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 12

ಕಾಂಗ್ರೆಸ್ ಗೆ ಬಹುಮತ: ಸಚಿವ  ಶ್ರೀರಾಮುಲುಗೆ ಮುಖ ಭಂಗ

ಇತ್ತೀಚಿನ ಸುದ್ದಿ