ಏಕಾಏಕಿ ಎದ್ದು ನಿಂತು ಅಂಬೇಡ್ಕರ್ ಫೋಟೋ ಯಾಕೆ ಹಾಕಿಲ್ಲ? ಎಂದು ಪ್ರಶ್ನಿಸಿದ ಶಾಸಕ ಅನ್ನದಾನಿ | ಗರಂ ಆದ ಸ್ಪೀಕರ್ - Mahanayaka
3:17 AM Wednesday 11 - December 2024

ಏಕಾಏಕಿ ಎದ್ದು ನಿಂತು ಅಂಬೇಡ್ಕರ್ ಫೋಟೋ ಯಾಕೆ ಹಾಕಿಲ್ಲ? ಎಂದು ಪ್ರಶ್ನಿಸಿದ ಶಾಸಕ ಅನ್ನದಾನಿ | ಗರಂ ಆದ ಸ್ಪೀಕರ್

vishweshwara hegade kageri
15/12/2021

ಬೆಳಗಾವಿ: ವಿಧಾನಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಇನ್ನೂ ಯಾಕೆ ಇಟ್ಟಿಲ್ಲ ಎಂದು  ಶಾಸಕ ಅನ್ನದಾನಿ ಪ್ರಶ್ನೆ ಮಾಡಿದ್ದು, ಈ ವೇಳೆ ಸಮಯವಲ್ಲದ ಸಮಯದಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೀರಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ನಡೆದಿದೆ.

ಸದನದಲ್ಲಿ ಇದ್ದಕ್ಕಿದಂತೆ ಎದ್ದು ನಿಂತು ಮಾತನಾಡಿದ ಅನ್ನದಾನಿ, ಕಳೆದ ಬಾರಿ ಅಧಿವೇಶನ ನಡೆದಾಗ ಸದನದಲ್ಲಿ ಅಂಬೇಡ್ಕರ್ ಫೋಟೋ ಇಡುವುದಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾಕೆ ಅಂಬೇಡ್ಕರ್ ಫೊಟೋವನ್ನು ಇಲ್ಲಿ ಹಾಕಿಲ್ಲ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಫೋಟೋ ಹಾಕಲು ಏನು ಸಮಸ್ಯೆ? ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಫೋಟೋವನ್ನು ಇನ್ನೂ ಯಾಕೆ ಸದನದಲ್ಲಿ ಹಾಕಿಲ್ಲ? ಯಾಕೆ ಇಷ್ಟು ತಾತ್ಸಾರ ಮಾಡುತ್ತಿದ್ದೀರಿ? ಫೋಟೋ ಹಾಕೋದಕ್ಕೆ ಏನಾಗಿದೆ? ಎಂದು ಅನ್ನದಾನಿ ತರಾಟೆಗೆತ್ತಿಕೊಂಡರು.

ಈ ವೇಳೆ ಗರಂ ಆದ ಸ್ಪೀಕರ್ ನೀವು ಕೇಳುತ್ತಿರುವ ಸಮಯ ಇದಲ್ಲ, ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ. ಸದನಕ್ಕೆ ಅದರದ್ದೇ ಆದ ರೀತಿ, ನೀತಿ ಇದೆ ಅದನ್ನು ಪಾಲಿಸಬೇಕು. ವಿಷಯದ ಗಂಭೀರತೆಯನ್ನು ಅರಿತು, ಆಯಾ ಸಮಯಕ್ಕೆ ಸರಿಯಾಗಿ ಪ್ರಸ್ತಾಪಿಸಬೇಕು. ಸುಖಾಸುಮ್ಮನೆ ಗಂಭೀರವಾದ ವಿಷಯಗಳನ್ನು ಪ್ರಸ್ತಾಪ ಮಾಡುವುದಲ್ಲ. ನಾನು ಅದಕ್ಕೆ ಉತ್ತರ ಕೊಡುತ್ತೀನಿ, ಅಶಿಸ್ತಿನಿಂದ ಮುಂದುವರಿದರೆ ನಾನು ಒಂದು ಹೆಜ್ಜೆ ಮುಂದು ಹೋಗಬೇಕಾಗುತ್ತದೆ. ನಂಗೆ ಯಾರೀ ನೀವು ಹೇಳೋದು? ನಂಗೆ ಏನ್ಮಾಡ್ಬೇಕು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಜವಾಬ್ದಾರಿ ಬೇಡ್ವಾ? ಎಲ್ಲರಿಗಿಂತಲೂ ಸಣ್ಣವನಾಗಿ ಹೇಳ್ತೀನಿ, ಸದನದ ಗೌರವ ಕಾಪಾಡಿಕೊಂಡು ಹೋಗಬೇಕು. ಸಂತೆಯಲ್ಲಿ ಮಾತನಾಡಿದ ಹಾಗೆ ಮಾತನಾಡಿದರೆ, ಅದು ಅಶಿಸ್ತಿನ ಪರಮಾವಧಿ. ನೀವು ಹೇಳಿರುವ ವಿಚಾರವನ್ನು ಜಾರಿಗೆ ತರಲು ನಾವು ಬದ್ಧವಾಗಿದ್ದೇವೆ. ಆದರೆ, ಇಂತಹ ವಿಚಾರಗಳನ್ನು ಪ್ರಸ್ತಾಪಿಸುವಾಗ ಸದನದ ಗೌರವವನ್ನು ಕಾಪಾಡಬೇಕು ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು | ಲಖನ್ ಜಾರಕಿಹೊಳಿ

ಮುಸ್ಲಿಮ್ ವ್ಯಕ್ತಿಯ ಪಾರ್ಥಿವ ಶರೀರ ಸಾಗಿಸಲು ದಾರಿ ಮಾಡಿಕೊಟ್ಟ ಹನುಮ ಮಾಲಾಧಾರಿಗಳು!

ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10

ವಿಧಾನ ಪರಿಷತ್ ಫಲಿತಾಂಶ: ಕಾಂಗ್ರೆಸ್ ಗೆಲುವು ಸಾಧಿಸಿದ ಕ್ಷೇತ್ರಗಳು

ಡಾನ್ಸ್ ಬಾರ್ ನ ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿದ್ದ 17 ಯುವತಿಯರ ರಕ್ಷಣೆ!

ಬೆಂಗಳೂರು ನಗರ: ಕೆ.ಜಿ.ಎಫ್. ಬಾಬುಗೆ ಸೋಲು, ಬಿಜೆಪಿ ಅಭ್ಯರ್ಥಿ ಗೋಪಿನಾಥ್ ಗೆಲುವು

ಇತ್ತೀಚಿನ ಸುದ್ದಿ