ಅಂಬೇಡ್ಕರ್ ಪ್ರತಿಮೆಗೆ ಅವಮಾನ: ವಿಧಾನಸೌಧದ ಎದುರು ಸಂವಿಧಾನ ಪರ ಸಂಘಟನೆಗಳಿಂದ ಪ್ರತಿಭಟನೆ - Mahanayaka

ಅಂಬೇಡ್ಕರ್ ಪ್ರತಿಮೆಗೆ ಅವಮಾನ: ವಿಧಾನಸೌಧದ ಎದುರು ಸಂವಿಧಾನ ಪರ ಸಂಘಟನೆಗಳಿಂದ ಪ್ರತಿಭಟನೆ

samvidhana para sanghatane
27/01/2022

ಬೆಂಗಳೂರು: ಸಂವಿಧಾನ ದಿನಾಚರಣೆಯ ದಿನವೂ ರಾಜ್ಯ ಸರ್ಕಾರ ಅಂಬೇಡ್ಕರ್ ಪ್ರತಿಮೆಗೆ  ಹಾರಾರ್ಪಣೆ ಮಾಡದೇ ನಿರ್ಲಕ್ಷ್ಯ ತೋರಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿವಿಧ ಸಂವಿಧಾನ ಪರ ಸಂಘಟನೆಗಳು ಬೆಂಗಳೂರಿನ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದವು.

ಸಂವಿಧಾನ ದಿನದಂದು ಕೂಡ ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡದೇ ಸರ್ಕಾರ ಅಗೌರವ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಂವಿಧಾನ ಪರ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಯ ಬಿಸಿ ಮುಟ್ಟುತ್ತಿದ್ದಂತೆಯೇ ಕೊನೆಗೆ ಅಧಿಕಾರಿಗಳು, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ನರಸಿಂಹಮೂರ್ತಿ ವಕೀಲರು, ಭಾರತೀಯ ವಿದ್ಯಾರ್ಥಿ ಸಂಘ (ಬಿ.ವಿ.ಎಸ್.)ದ ಸಂಯೋಜಕ ಮೂರ್ತಿ ಭೀಮರಾವ್, ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ  ವೇಣುಗೋಪಾಲ್ ಮೌರ್ಯ, ಮಣಿ ಡಿ ಪಿ ಐ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅನ್ಯಜಾತಿ ಹುಡುಗಿಯೊಂದಿಗೆ ಮದುವೆ: ಲೈಟ್ ಕಂಬಕ್ಕೆ ಕಟ್ಟಿ ಹುಡುಗನ ತಾಯಿ ಮೇಲೆ ಹಲ್ಲೆ

ಸ್ಟೇರಿಂಗ್ ತುಂಡಾಗಿ ಬಸ್ ಪಲ್ಟಿ: 20 ಮಂದಿ ಗಂಭೀರ

ಗಣರಾಜ್ಯೋತ್ಸವ ವೇಳೆ ವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸಾವು

ಸಂವಿಧಾನ ದಿನದಂದೇ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸರ್ಕಾರದಿಂದ ಅಗೌರವ!

ಕಡಿಮೆ ಬೆಲೆಯ ಚಿನ್ನಾಭರಣ ಖರೀದಿಸಲು ಹೋಗಿದ್ದ ಯುವಕ ಶವವಾಗಿ ಪತ್ತೆ!

ಇತ್ತೀಚಿನ ಸುದ್ದಿ