ಅಂಬೇಡ್ಕರ್ ಹೇಳಿದ ಸಂಘಟನೆ ಮತ್ತು ಶಿಕ್ಷಣ ಅತ್ಯಗತ್ಯ: ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪಾಡಿ
ಕಡಬ: ಅಂಬೇಡ್ಕರ್ ಹೇಳಿದ ಹಾಗೆ ಸಂಘಟನೆ ಇಲ್ಲದೆ ಯಾವ ಕೆಲಸವೂ ಆಗಲ್ಲ. ಅದರ ಜೊತೆಗೆ ಶಿಕ್ಷಣವು ಅತ್ಯಗತ್ಯ ಎಂದು ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪಾಡಿ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚಿಗೆ ಕಡಬ ತಾಲೂಕಿನ ಮೊಗೇರ ಸೇವಾ ಸಂಘದ ನೂತನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆನಂದ ದೋಣಿಗಂಡಿ ಮಾತನಾಡಿ, ಸಂಘವು 24 ಅಂಶಗಳನ್ನು ಒಳಗೊಂಡ ಬೈಲಾವನ್ನು ಹೊಂದಿದೆ. ಆ ಬೈಲಾದ ಪ್ರಕಾರ ನಮ್ಮ ಸಮುದಾಯದ ಎಲ್ಲಾ ಬಂಧುಗಳಿಗೆ ಸಂಘದ ಸಂಘ ಸಂಸ್ಥೆಗಳ ಸಹಕಾರದ ಮೂಲಕ ಬೇರೆ ಬೇರೆ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳನ್ನು ಒದಗಿಸಿಕೊಡುವ ಮತ್ತು ಮಾಹಿತಿ ಮಾರ್ಗದರ್ಶನಗಳನ್ನು ನೀಡುವ ಮೂಲಕ ಜನರಿಗೆ ತಲುಪಿಸುವ ಉದ್ದೇಶವನ್ನು ಈ ಸಂಘವು ಮಾಡುತ್ತದೆ ಎಂದರು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಶರವೂರು ಇದರ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಬಾಬು ಎಂ. ಮರುವಂತಿಲ್ಲ ಉದ್ಘಾಟಿಸಿದರು. ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರವನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕರಾದ ಮಾಲಪ್ಪ ಮಾಸ್ತರ್ ಚಿ. ಜವಾಬ್ದಾರಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ, ತಾಲೂಕು ಪಂಚಾಯತ್ ಕಡಬ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಮೆಸ್ಕಾಂ ಪುತ್ತೂರು ಇದರ ಶಾಖಾಧಿಕಾರಿಗಳಾದ ಸುಂದರ ಕೇಪುಳು, ಒಡಿಯೂರು ಶ್ರೀ. ಗ್ರಾ. ವಿ. ಯೋಜನೆ ಪುತ್ತೂರು, ಕಡಬ ಇದರ ಸಂಯೋಜಕರಾದ ಜಯಂತಿ ಚಿ., ಕುಂಡಾಜೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಜಯಶ್ರೀ ಗಾಣಂತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಡಾಯಿ ಒಕ್ಕೂಟದ ಕಾರ್ಯದರ್ಶಿ ಅಣ್ಣು ಕುಮಾರ್ ಕೆ., ಒಡಿಯೂರು ಶ್ರೀ. ಗ್ರಾ, ವಿ. ಘಟ ಸಮಿತಿ ಕುಂಡಾನೆ ಇದರ ಕಾರ್ಯದರ್ಶಿ ಗುರುವಪ್ಪ ಕೆ., ಕಡಬ ತಾ.ಪಂ. ಮಾಜಿ ಸದಸ್ಯೆ ಲಲಿತಾ ಈಶ್ವರ್, ಶ್ರೀ ಬ್ರಹ್ಮ ಮೊಗೇರ್ಕಳ ಚಾರಿಟೇಬಲ್ ಟ್ರಸ್ಟ್, ಬೊಟ್ಟಡ್ಡ ಇದರ ಸಂಚಾಲಕ ಶಶಿಧರ್ ಬೊಟ್ಟಡ್ಡ, ಮೊಗೇರ ಸೇವಾ ಸಂಘ ಆಲಂಕಾರು ಇದರ ನಿಯೋಜಿತ ಅಧ್ಯಕ್ಷ ಕೇಶವ ಕುಪ್ಲಾಜೆ, ಹಿರಿಯ ದೈವ ಪರಿಚಾರಕ ನಕ್ಕುರ ಮೊಗೇರ ಸುರುಷಬೆಟ್ಟು ಕುಂತೂರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw