ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ - Mahanayaka
3:20 PM Thursday 21 - November 2024

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ

ambedkar song
30/09/2021

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ತಮ್ಮ ಪ್ರಪ್ರಥಮ ಪ್ರಯೋಗವಾಗಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಕುರಿತ ಹಾಡನ್ನು ಯ್ಯೂಟೂಬ್ ಚಾನಲ್ ಮೂಲಕ ಬಿಡುಗಡೆಗೊಳಿಸಿದೆ.

ರವಿ ಪಂಬಾರು ಅವರ ಸಾಹಿತ್ಯದಲ್ಲಿ ಅಣ್ಣು ತಿಂಗಳಾಡಿ ಅವರ ಗಾಯನದ ಮೂಲಕ ಸಿದ್ದಗೊಂಡ ಹಾಡನ್ನು ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಅಂಬೇಡ್ಕರ್ ಭವನದಲ್ಲಿ  ಬಿಡುಗಡೆಗೊಳಿಸಲಾಯಿತು.  ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸುಂದರ ಪುತ್ತಿಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಲ್ಲತ್ತಡ್ಕ ಅವರು ಪವನ್ ಕ್ರಿಯೇಷನ್ಸ್ ಯ್ಯೂಟೂಬ್ ಚಾನಲ್ ಮೂಲಕ ಹಾಡು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಸಾಹಿತ್ಯ ರಚನೆಗಾರ ರವಿ ಪಂಬಾರು, ಗಾಯಕರಾದ ಅಣ್ಣು ತಿಂಗಳಾಡಿ, ಅಜ್ಜಾವರ ಘಟಕ ಅಧ್ಯಕ್ಷ ಹರೀಶ್ ಮೇನಾಲ, ತಾಲೂಕು ಕಾರ್ಯದರ್ಶಿಗಳಾದ ನವೀನ್ ಕಾಟಿಪಳ್ಳ,ಸುಂದರ ಬಾಡೇಲು, ಅಜ್ಜಾವರ ಘಟಕ ಕಾರ್ಯದರ್ಶಿಗಳಾದ ಬಾಲಕೃಷ್ಣ ಸಬ್ರಕಜೆ ಅವರು ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು. ಸಮಿತಿಯ ಪ್ರಧಾನಕಾರ್ಯದರ್ಶಿ ಬಾಲಕೃಷ್ಣ ದೊಡ್ಡೇರಿ ಕಾರ್ಯಕ್ರಮ ನಿರೂಪಿಸಿದರು.

ಬಿಡುಗಡೆಯಾದ ವಿಡಿಯೋ:




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಯತೀಶ್ ಕುಮಾರ್ ರವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರವಿ ಡಿ. ಚೆನ್ನಣ್ಣನವರ್

ಬ್ರೇಕಿಂಗ್ ನ್ಯೂಸ್:  ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಮಂಗಳೂರು: ನಿಮ್ಮ ವಾಹನದ ವಿಮೆ ಅವಧಿ ಮುಗಿದಿದ್ದರೆ 4 ಸಾವಿರದವರೆಗೆ ದಂಡ ಖಚಿತ

ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆಗೆ ಹೊಸ ತಿರುವು: ನಾಪತ್ತೆಯಾದ ದಿನ ಹಣ ಡ್ರಾ ಮಾಡಿದ್ದ ಗಿರಿರಾಜ್!

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ “ನೈಟ್ ಪೊಲಿಟಿಕ್ಸ್” ಚೆನ್ನಾಗಿ ಗೊತ್ತು | ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ

ಕಣ್ಣ ಮುಂದೆಯೇ ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದರೂ ರಕ್ಷಿಸಲು ಸಾಧ್ಯವಾಗಲಿಲ್ಲ!

ಅನೈತಿಕ ಸಂಬಂಧದ ಆರೋಪ ಹೊರಿಸಿ ಮಹಿಳೆ ಹಾಗೂ ಪುರುಷನ ಬೆತ್ತಲೆ ಮೆರವಣಿಗೆ!

ಇತ್ತೀಚಿನ ಸುದ್ದಿ