ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿಚಾರದ ಚರ್ಚೆಯ ನಡುವೆಯೇ ಬೌದ್ಧ ಧರ್ಮಕ್ಕೆ ಮತಾಂತರವಾಗಬಹುದೇ ಎನ್ನುವ ಪ್ರಶ್ನೆಯ ವಿಚಾರವಾಗಿ ತೀವ್ರ ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾತನಾಡುತ್ತಾ, ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂದು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಹಿಂದೂ ಧರ್ಮದಲ್ಲಿ ಅನೇಕ ಲೋಪಗಳಿವೆ. ಅದನ್ನು ಸರಿಪಡಿಸಿಕೊಳ್ಳದಿದ್ದರೆ ಮತಾಂತರವಾಗುತ್ತೇನೆ ಎಂದು 1936ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆಗ ಹಲವರು ಮತಾಂತರವಾಗಲು ರೆಡ್ ಕಾರ್ಪೆಟ್ ಹಾಕಿದ್ದರು. ರೆಡ್ ಕಾರ್ಪೆಟ್ ಹಾಕಿದರೂ ಅವರು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ರಾಷ್ಟ್ರಾಂತರವಾಗುತ್ತದೆ ಎಂದಿದ್ದರು. 20 ವರ್ಷದ ಬಳಿಕ ಅವರು ಬೌದ್ಧ ಧರ್ಮಕ್ಕೆ ಮತಾಂತರವಾದರು ಎಂದರು.
ಈ ವೇಳೆ ಮಾತನಾಡಿದ ಶಾಸಕ ಎನ್.ಮಹೇಶ್, 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಒಂದು ಮಾತು ಹೇಳಿದ್ದರು. ನಿಜವಾಗಿ ಹೇಳುವುದಾದರೆ ನಾನು ಆರಿಸಿಕೊಂಡ ಧರ್ಮ ಹೊಸದಲ್ಲ. ಇದು ಹೊರಗಿನಿಂದ ಬಂದಿರುವ ಧರ್ಮವೂ ಅಲ್ಲ. ಬೌದ್ಧ ಧರ್ಮ ಈ ನೆಲದ್ದಾಗಿದೆ. ಹೀಗಾಗಿ ಇದು ಮತಾಂತರ ಅಲ್ಲವೆಂದು ಹೇಳಿದ್ದರು. ತಾನು ನನ್ನ ಮೂಲ ಧರ್ಮಕ್ಕೆ ಹೋಗುತ್ತೇನೆಂದು ಅವರು ಹೇಳಿದ್ದರು ಎಂದು ಅಂಬೇಡ್ಕರ್ ಮಾತನ್ನು ಮಹೇಶ್ ಉಲ್ಲೇಖಿಸಿದರು.
ಸಚಿವ ಮಾಧುಸ್ವಾಮಿ ಕೂಡ ಮಾತನಾಡಿ, ಬೌದ್ಧಧರ್ಮಕ್ಕೆ ಹೋಗುವುದು ಮತಾಂತರವಲ್ಲ ಎಂದಿದ್ದಾರೆ. ‘‘ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ. ‘ಬೌದ್ಧ ಧರ್ಮವೂ ಹಿಂದೂ ಧರ್ಮದ ಭಾಗವಾಗಿದೆ’’ ಎಂದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್ ಅವರ ಮತ್ತೊಂದು ಮಾತನ್ನು ಉಲ್ಲೇಖಿಸಿ, ಅಂಬೇಡ್ಕರ್ ಅವರು, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ. ಹಿಂದೂ ಧರ್ಮ ಸುಧಾರಣೆಗೆ ನಾನು ಪ್ರಯತ್ನ ಮಾಡಿದ್ದೇನೆ. ಆದರೆ ನನ್ನಿಂದ ಅದು ಸಾಧ್ಯವಾಗಲೇ ಇಲ್ಲ. ಯಾರಿಗೆ ನೋವಾಗಿದ್ದರೆ ಅವರು ಮತಾಂತರವಾಗಿ ಎಂದಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸುವ ಮೂಲಕ ಚರ್ಚೆಗೆ ಅಂತಿಮ ರೂಪ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಶೀಘ್ರದಲ್ಲೇ ಉದ್ಯೋಗ ನೀತಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ
ಕೊಳ್ಳೆಗಾಲದಲ್ಲಿ ನಿಗೂಢ ವಸ್ತು ಸ್ಪೋಟ: ಮನೆ ಸಂಪೂರ್ಣ ಛಿದ್ರ
ಬೆಂಗಳೂರಲ್ಲಿ ಹವಾಲಾ ದಂಧೆ ಬೆಳಕಿಗೆ: ನಾಲ್ಕು ಮಂದಿ ಆರೋಪಿಗಳ ಬಂಧನ
ಲೂಧಿಯಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ: ಇಬ್ಬರು ಸಾವು, ಐದು ಮಂದಿ ಗಾಯ
ಬಿಜೆಪಿ ಮುಖಂಡರಿಂದ ಅಯೋಧ್ಯೆ ಸುತ್ತಲಿನ ಭೂಮಿ ಲೂಟಿ: ಪ್ರಿಯಾಂಕಾ ಗಾಂಧಿ ಆರೋಪ