ಅಂಬೇಡ್ಕರ್ ಅವರ ಜೀವನಚರಿತ್ರೆ ದೇಶ ಕಟ್ಟುವವರಿಗೆ ಮಾರ್ಗದರ್ಶಕ: ಸದಾಶಿವ ಪಡುಬಿದ್ರೆ

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಪ್ರೋ.ಕೃಷ್ಣಪ್ಪ ಬಣ. ತಾಲೂಕು ಸಮಿತಿ ಮಂಗಳೂರು ಇದರ ವತಿಯಿಂದ ಸರಿಯಾಗಿ ಸಾಮ್ರಾಟ್ ಅಶೋಕ ಚಕ್ರವರ್ತಿ ಸಭಾಭವನ ಸಿದ್ಧಾರ್ಥ ನಗರ ಬಜ್ಪೆ ಇಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೆಯ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಕಿ ಗೌರವ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರೆ ಮಾತನಾಡಿ, ಅಂಬೇಡ್ಕರ್ ರವರ ಹುಟ್ಟು ಹಾಗೂ ಅವರ ಜೀವನಚರಿತ್ರೆಯೆ ಈ ದೇಶವನ್ನು ಕಟ್ಟಿ ಬೆಳೆಸುವವರಿಗೆ ಮಾರ್ಗದರ್ಶನವಾಗಿದೆ. ನಾವುಗಳು ದಿನನಿತ್ಯ ಸ್ತೂತಿಸುವ ಕಣ್ಣಿಗೆ ಕಾಣದೆ ದೇವರ ನಾಮಸ್ಮರಣೆಗಿಂತ ನಮ್ಮ ಜೀವನದಲ್ಲಿ ಒಂದು ಬಾರಿ ಅಂಬೇಡ್ಕರ್ ರವರು ಬರೆದ. ಅವರ ಸಾಧನೆಗಳನ್ನು ತಿಳಿಸುವ ಪುಸ್ತಕವನ್ನು ಓದಿದರೆ ನಮ್ಮ ಜೀವನಕ್ಕೆ ನಿಜವಾದ ದಾರಿ ಸಿಗುತ್ತದೆ ಮತ್ತು ನಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.
ದೀಪ ಬೆಳಗಿಸಿ ಮಾತನಾಡಿದ ಅರೋಗ್ಯ ಇಲಾಖೆ ನೌಕರರಾದ ಎಚ್.ಡಿ.ಲೋಹಿತ್, ಈ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಮತ್ತು ಸ್ವಾತಂತ್ರ್ಯ ಸಿಕ್ಕಿದ ಮೇಲೆ ದೇಶವನ್ನು ಆಳುವುದಕ್ಕೆ ಕಾನೂನು ಚೌಕಟ್ಟನ್ನು ಅಂಬೇಡ್ಕರ್ ರವರು ಬರೆಯದೆ ಹೋಗಿದ್ದಾರೆ. ಈ ದೇಶದಲ್ಲಿರುವ ಎಂಬತ್ತು ಶೇಕಡಾ ಇರುವ ಬಹುಜನರ ರಕ್ಷಿಸುವವರು/ಅವರು ಪರಿಸ್ಥಿತಿಯನ್ನು ಕೇಳುವವರಿಲ್ಲವಾಗಿರುತ್ತಿತ್ತು. ನಿಜವಾಗಿ ಅಂಬೇಡ್ಕರ್ ಅವರ ಚಿಂತನೆ ಹೋರಾಟವನ್ನು ತಿಳಿದುಕೊಂಡಾಗ ಅಂಬೇಡ್ಕರ್ ಎಂಬ ಸೂರ್ಯ ನ ಕಿರಣ ಭಾರತವನ್ನಲ್ಲದೆ, ಇಡಿ ವಿಶ್ವವನ್ನೆ ಬೆಳಗಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಮಾತಾಡಿ, ಆಡಳಿತ ಮಾಡುವ ಪಕ್ಷಗಳು ಅಂಬೇಡ್ಕರ್ ಎಂಬ ಹೆಸರನ್ನು ಉಪಯೋಗಿಸಿ ಮುಗ್ದಮನಸ್ಸುಗಳನ್ನು ವಂಚಿಸಿ ಚುನಾವಣೆ ಸಂದರ್ಭದಲ್ಲಿ ಉದ್ದ ಉದ್ದ ಭಾಷಣ ಬಿಗಿದು, ಜನರು ದಾರಿ ತಪ್ಪಿಸಿ ಓಟು ಪಡೆದು ನಮ್ಮನ್ನಾಳುವ ಸರಕಾರ ರಚಿಸುತ್ತಾರೆ, ಸಂವಿಧಾನದಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ,ವಿವಿಧ ಸರಕಾರಿ ಇಲಾಖೆಗಳಲ್ಲಿ ನೌಕರರಾಗಿ ದುಡಿಯುವವರಿಗೆ ಅಧಿಕಾರಿಗಳಿಗೆ, ನೌಕರರಿಗೆ ಅಂಬೇಡ್ಕರ್ ದಿನಾಚರಣೆ ದಿವಸ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸುವ ಸೌಜನ್ಯ ಇರುವುದಿಲ್ಲ. ಸರಕಾರವು ಇಲಾಖೆಗಳಿಗೆ ಅಂಬೇಡ್ಕರ್ ದಿನಾಚರಣೆ ನಡೆಸಲು ಸುತ್ತೋಲೆ ಕಳುಹಿಸಿದೆ ಎಂದ ಮಾತ್ರಕ್ಕೆ ಅವರು ಭಾವಚಿತ್ರಕ್ಕೆ ಹೂ ಹಾರಹಾಕಿ ಕಾಟಾಚಾರಕ್ಕೆ ಅಂಬೇಡ್ಕರ್ ದಿನಾಚರಣೆ ಆಚರಿಸುತ್ತಾರೆ. ಅಂಬೇಡ್ಕರ್ ವಿಶ್ವ ಮಾನವ ಆಗಿದ್ದರು, ಅವರ ಹುಟ್ಟು ಹಬ್ಬದ ಆಚರಣೆ ಕೇವಲ ದಲಿತ ಜನಾಂಗಕ್ಕೆ, ದಲಿತ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿದೆ ಎಂದರು.
ದಲಿತ ಕಲಾ ಮಂಡಳಿ ಸಂಚಾಲಕರಾದ ಗಂಗಾಧರ್ ಮಾತಾಡಿ, ಈ ದೇಶದ ಶೋಷಿತರ ಅಂದಿನ ಬದುಕಿಗೂ ಇಂದಿನ ಬದುಕಿಗೂ ತುಂಬಾ ವ್ಯತ್ಯಾಸವಿದೆ. ಇದಕ್ಕೆ ಅಂಬೇಡ್ಕರ್ ರವರ ಹೋರಾಟವೆ ಕಾರಣ ಎಂದರು.
ವೇದಿಕೆಯಲ್ಲಿ ಸಿದ್ಧಾರ್ಥ ನಗರ ಗ್ರಾಮ ಶಾಖೆಯ ಸಂಚಾಲಕರಾದ ಚಂದ್ರಶೇಖರ್, ತಾಲೂಕು ಸಮಿತಿ ಸದಸ್ಯೆ ಗೀತಾ ಕರಂಬಾರು ಪ್ರಮುಖರಾಗಿದ್ದರು. ರಘು ಕೆ. ಎಕ್ಕಾರು. ( ಜಿಲ್ಲಾ ಸಂಘಟನಾ ಸಂಚಾಲಕರು), ಕೃಷ್ಣಾನಂದ ಡಿ. ( ಅಧ್ಯಕ್ಷರು ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ ಬಜ್ಪೆ,) ಸಂಕಪ್ಪ ಕಾಂಚನ್ (ಅಧ್ಯಕ್ಷರು, ವಿಮಾನ ನಿಲ್ದಾಣ ನಿರ್ವಹಿಸಿತರ ಅಭಿವೃದ್ಧಿ ಸಮಿತಿ ಸಿದ್ಧಾರ್ಥ ನಗರ) ತಾಲೂಕು ಸಮಿತಿ ಸದಸ್ಯರುಗಳಾದ ಗೋಪಾಲ ಬಾರಿಂಜ, ಹರೀಶ್ ಎಂ.ಬಿ., ಹಾಗೂ ಲಿಂಗಪ್ಪ ಕುಂದರ್ (ಸಂಚಾಲಕರು ಕೆಂಜಾರು ಗ್ರಾಮ) ಗೋಪಾಲ್ ಸಾಲಿಯನ್, ತಾರಾ ಎಂ.ಬಿ., ಯಮುನಾ ಕಾಂಚನ್, ಚೆನ್ನಪ್ಪ ಸಾಲಿಯಾನ್ ರಮೇಶ್ ಸುವರ್ಣ ಕರಂಬಾರು. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಲೂಕು ಸಂಘಟನಾ ಸಂಚಾಲಕರಾದ ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ತಾಲೂಕು ಖಜಾಂಚಿಯಾದ ರುಕ್ಕಯ ಅಮೀನ್ ಧನ್ಯವಾದ ಸಲ್ಲಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD