ಆಂಬುಲೆನ್ಸ್  ಸಿಗಲಿಲ್ಲ: ಮಗಳ ಮೃತದೇಹ ಹೆಗಲಲ್ಲಿ ಹೊತ್ತು ನಡೆದ ತಂದೆ! - Mahanayaka
8:03 PM Wednesday 11 - December 2024

ಆಂಬುಲೆನ್ಸ್  ಸಿಗಲಿಲ್ಲ: ಮಗಳ ಮೃತದೇಹ ಹೆಗಲಲ್ಲಿ ಹೊತ್ತು ನಡೆದ ತಂದೆ!

powdi
11/06/2022

ಭೋಪಾಲ್: ಆಸ್ಪತ್ರೆಯಲ್ಲಿ ಮೃತಪಟ್ಟ ತಮ್ಮ 4 ವರ್ಷದ ಮಗಳ ಮೃತದೇಹವನ್ನು ಮನೆಗೆ ತರಲು  ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದೇ ತಂದೆ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ಕರುಳು ಹಿಂಡುವ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪೌಡಿ ಗ್ರಾಮದ ಬಾಲಕಿಯನ್ನು ಸೋಮವಾರ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿಯು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.  ಮಗಳ ಮೃತದೇಹವನ್ನು ತಂದೆ ಲಕ್ಮಣ್ ಸಾರ್ವಜನಿಕ ಬಸ್ಸಿನಲ್ಲಿ ಅರ್ಧದವರೆಗೆ ತಂದಿದ್ದಾರೆ. ಅಲ್ಲಿಂದಲಾದರೂ ಗಾಡಿ ಕೊಡಿ ಎಂದು ನಗರಸಭೆಗೆ ಕೇಳಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.

ಯಾರ ಸ್ಪಂದನೆಯೂ ಸಿಗದೇ ಇದ್ದಾಗ ವಿಧಿಯಿಲ್ಲದೇ ತಂದೆ ಮಗಳ ಮೃತದೇಹವನ್ನು ಹೆಗಲಿನಲ್ಲಿ ಹೊತ್ತು ನಡೆಯುವಂತಾಗಿತ್ತು. ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ  ದಾಮೋಹ್‌ನ ಆಸ್ಪತ್ರೆಯ ವೈದ್ಯರು, ನಮ್ಮ ಬಳಿ ಯಾರೂ ವಾಹನ ಕೇಳಿಲ್ಲ ಎಂದು ಸಮಸ್ಯೆಯಿಂದ ಎಸ್ಕೇಪ್ ಆಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೋಳಿ ಸಾರಿಗಾಗಿ ಪತ್ನಿಯನ್ನು ಇರಿದುಕೊಂದ ಪಾಪಿ!

ಪ್ರವಾದಿ ವಿರುದ್ಧ ಹೇಳಿಕೆ ವಿರುದ್ಧ ಸಿಡಿದೆದ್ದ ಮುಸ್ಲಿಮರ ಪ್ರತಿಭಟನೆ ಬಗ್ಗೆ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದೇನು?

ಉಕ್ರೇನ್‌ ಗಾಗಿ ಹೋರಾಡಿದ ವಿದೇಶಿಯರಿಗೆ ಮರಣದಂಡನೆ ನೀಡಿದ ರಷ್ಯಾ

ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು?

ಇತ್ತೀಚಿನ ಸುದ್ದಿ