ಅಂಬೇಡ್ಕರ್‌ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ - Mahanayaka
2:11 AM Wednesday 5 - February 2025

ಅಂಬೇಡ್ಕರ್‌ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ

sahayadhana
27/06/2022

ಪುತ್ತೂರು: ತಾಲೂಕಿನ ಪಡ್ನೂರು ಗ್ರಾಮದ ಕೊಡಂಗೆ ನಿವಾಸಿಯಾಗಿರುವ ಪ.ಜಾತಿಯ ಮೊಗೇರ ಸಮುದಾಯದ ಸ್ವಾತಿ ಕೆ. ಅವರು ಎಸೆಸೆಲ್ಸಿಯಲ್ಲಿ  540 ಅಂಕ ಗಳಿಸಿದ್ದು, ಇವರ ಮುಂದಿನ ವಿದ್ಯಾಭ್ಯಾಸಕ್ಕೆ ಬಂಟ್ವಾಳ ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಮಾಜ ಸೇವಾ ಸಂಘದ ವತಿಯಿಂದ ಧನ ಸಹಾಯ ನೀಡಲಾಯಿತು.

ತೀರಾ ಬಡ ಕುಟುಂಬದವರಾಗಿರುವ ವಿಮಲಾ ಮತ್ತು ಪಿ.ಕೆ. ಬಾಬು ದಂಪತಿಯ ನಾಲ್ಕನೇ ಪುತ್ರಿಯಾಗಿರುವ ಸ್ವಾತಿ,  ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹಿಸಿರುವ ಅಂಬೇಡ್ಕರ್‌ ಸಮಾಜ ಸೇವಾ ಸಂಘ ಆರ್ಥಿಕ ಸಹಾಯವನ್ನು ನೀಡಿತು.

ಈ ವೇಳೆ ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್‌ ಅರಳ, ಕಾರ್ಯಾಧ್ಯಕ್ಷ ರಾಜಾ ಚೆಂಡ್ತಿಮಾರ್‌, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಕೃಷ್ಣಾಪುರ, ಕ್ರೀಡಾ ಕಾರ್ಯದರ್ಶಿ ನಾರಾಯಣ ನಂದಾವರ ಹಾಗೂ ಸದಸ್ಯರಾದ ಉಮೇಶ್‌ ಮಾವಿನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು!

ತಾಯಿ ಮಗಳ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ: ಕೃತ್ಯದ ಬಳಿಕ ಕಾಲುವೆಗೆ ಎಸೆದ ಪಾಪಿಗಳು

ಮದುವೆ ನಡೆದು ಕೆಲವೇ ಗಂಟೆಗಳಲ್ಲಿ ವರ ಸಾವು!

ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ: ಮದ್ರಸ ಶಿ‍ಕ್ಷಕ ಅರೆಸ್ಟ್

ಫ್ಯಾಶನ್ ಬ್ಲಾಗರ್ ಳನ್ನು ಕೈಕಾಲು ಕಟ್ಟಿ ಕಟ್ಟಡದಿಂದ ಕೆಳಗೆಸೆದ ಪತಿ!

 

 

ಇತ್ತೀಚಿನ ಸುದ್ದಿ