ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ದೊಡ್ಡ ಬದಲಾವಣೆ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

Amendment’s in Karnataka State Police Recruitment : ಕರ್ನಾಟಕ ಪೊಲೀಸ್ ಇಲಾಖೆಯ ನೇರ ನೇಮಕಾತಿ ಹುದ್ದೆಗಳಾದ ಪೊಲೀಸ್ ಕಾನ್ಸ್ಟೇಬಲ್, DySP ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಸಂಬಂದಿಸಿದ ಹಲವು ಬದಲಾವಣೆಗಳನ್ನು ಕರ್ನಾಟಕ ಸರ್ಕಾರವು ಮಾಡಿ ಆದೇಶ ಹೊರಡಿಸಿದೆ.
ಯಾವ ಬದಲಾವಣೆಗಳನ್ನು ಮಾಡಲಾಗಿದೆ?
ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇರ ನೇಮಕಾತಿಯ ಪ್ರಕ್ರಿಯೆಯಲ್ಲಿ ಮಾಡಲಾಗಿರುವಂತಹ ಬದಲಾವಣೆ ಎಂದರೆ ಅದು ಕ್ರೀಡಾ ಸಾಧಕರಿಗೆ ಇದ್ದ ಮೀಸಲಾತಿ ಹುದ್ದೆಗಳನ್ನು ಹೆಚ್ಚಳ ಮಾಡಿರುವುದಾಗಿದೆ.
ಇಲ್ಲಿಯವರೆಗೆ ಕ್ರೀಡಾ ಸಾಧಕರಿಗೆ ಅಥವಾ ಕ್ರೀಡಾ ಮಿಸಲಾತಿ ಹೊಂದಿರುವಂತಹ ಅಭ್ಯರ್ಥಿಗಳಿಗೆ ಒಟ್ಟು ಹುದ್ದೆಗಳಲ್ಲಿ 2% ಹುದ್ದೆಗಳನ್ನು ಇವರಿಗಾಗಿ ಮಿಸಲಿಡಲಾಗಿತ್ತು. ಆದರೆ ಆದರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿರುವ ಪ್ರಕಟಣೆಯ ಪ್ರಕಾರ, 2% ನಿಂದ 3% ಗೆ ಏರಿಸಲಾಗಿದೆ.
ಅಷ್ಟೇ ಅಲ್ಲದೆ ಅವರಿಗೆ ಇದ್ದ ಗರಿಷ್ಟ ವಯೋಮಿತಿಯನ್ನು ಕೂಡ ಹೆಚ್ಚಿಸಿದ್ದು, ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 38 ವರ್ಷ
* 2ಎ, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಿಗೆ – 40 ವರ್ಷ
* SC, ST ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ – 45 ವರ್ಷ
ಇದು ಯಾವಾಗ ಅನ್ವಯವಾಗಲಿದೆ?
ಸದ್ಯಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವಾರು ಕಾನ್ಸ್ಟೇಬಲ್ ಹಾಗೂ ಪಿಎಸ್ಐ ಹುದ್ದೆಗಳು ಖಾಲಿ ಇದ್ದು, ಒಳ ಮೀಸಲಾತಿ ಬದಲಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಇದು ಫೈನಲ್ ಆದ ತಕ್ಷಣವೆ ನೇಮಕಾತಿ ಆಗುವ ಹುದ್ದೆಗಳಿಗೆ ಇದು ಅನ್ವಯವಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7