ಅಮೆರಿಕಕ್ಕೆ ವಿಮಾನಯಾನ ಸೇವೆ ರದ್ದುಗೊಳಿಸಿದ ಏರ್ ​ಇಂಡಿಯಾ - Mahanayaka
5:25 AM Thursday 19 - September 2024

ಅಮೆರಿಕಕ್ಕೆ ವಿಮಾನಯಾನ ಸೇವೆ ರದ್ದುಗೊಳಿಸಿದ ಏರ್ ​ಇಂಡಿಯಾ

air india
19/01/2022

ನವದೆಹಲಿ: ಬುಧವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿರುವ ಕೆಲವು ವಿಮಾನ ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.

ಪ್ರಯಾಣಿಕರಿಗೆ ಈ ಮೂಲಕ ಏರ್​ ಇಂಡಿಯಾ ಮಾಹಿತಿ ನೀಡಿದ್ದು, ದೆಹಲಿಯಿಂದ ಅಮೆರಿಕದ ಜಾನ್​ ಎಫ್​ ಕೆನಡಿ ಇಂಟರ್​ನ್ಯಾಷನಲ್ ಏರ್​ಫೋರ್ಟ್, ದೆಹಲಿಯಿಂದ ಅಮೆರಿಕದ ಓಹಾರೆ ಇಂಟರ್​ ನ್ಯಾಷನಲ್ ಏರ್​​ಪೋರ್ಟ್, ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ ಇಂಟರ್​ನ್ಯಾಷನಲ್ ಏರ್​ಪೋರ್ಟ್​ ಮತ್ತು ಮುಂಬೈನಿಂದ ಅಮೆರಿಕದ ನೆವಾರ್ಕ್ ಇಂಟರ್​ನ್ಯಾಷನಲ್ ಏರ್​ಪೋರ್ಟ್​ಗೆ ತೆರಳಲಿರುವ ಮತ್ತು ಅಲ್ಲಿಂದ ಬರಲಿರುವ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಮತ್ತೊಂದು ಟ್ವೀಟ್​ನಲ್ಲಿ ದೆಹಲಿಯಿಂದ ವಾಷಿಂಗ್ಟನ್ ಡಿಸಿ ಹೊರಡಲಿರುವ AI103 ವಿಮಾನ ನಿಗದಿಯಂತೆ ಕಾರ್ಯಾಚರಣೆ ಮಾಡಲಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಅಮೆರಿಕದ ವಿವಿಧ ಸ್ಥಳಗಳಿಗೆ ವಿಮಾನ ಸಂಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.


Provided by

ವಿಮಾನಯಾನ ಸಂಚಾರಕ್ಕೆ ರದ್ದುಗೊಳಿಸಲು ಕಾರಣ: ಅಮೆರಿಕದಲ್ಲಿ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಕಾರಣದಿಂದ ವಿಮಾನಯಾನ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಏರ್​ ಇಂಡಿಯಾ ಟ್ವೀಟ್​ನಲ್ಲಿ ಹೇಳಿದೆ. ಮೂಲಗಳ ಪ್ರಕಾರ 5ಜಿ ತಂತ್ರಜ್ಞಾನ ಅಳವಡಿಕೆಯಿಂದಾಗಿ ವಿಮಾನದಲ್ಲಿನ ಕೆಲವು ಉಪಕರಣಗಳು ಸರಿಯಾಗಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣದಿಂದ ಏರ್​ ಇಂಡಿಯಾ ತಮ್ಮ ವಿಮಾನಯಾನ ಸೇವೆಯನ್ನು ಅಮೆರಿಕಕ್ಕೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಇಎಂಎಲ್ ಖಾಸಗೀಕರಣ ಪ್ರಶ್ನಿಸಿ ಪಿಐಎಲ್ : ಕರ್ನಾಟಕ ಹೈಕೋರ್ಟ್‌‌ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್

ವೀಕೆಂಡ್ ಕರ್ಫ್ಯೂ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು: ತ್ಯಾಜ್ಯ ವಿಲೇವಾರಿ ವಿಳಂಬ; ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ಎಚ್ಚರಿಕೆ 

ಕೋವಿಡ್ ಲಸಿಕೆ ಸಾವು ತಪ್ಪಿಸುತ್ತದೆಯೇ ಹೊರತು ಸೋಂಕು ಬರುವುದನ್ನಲ್ಲ: ಸಚಿವ ಡಾ. ಸುಧಾಕರ್‌

ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ 

ಇತ್ತೀಚಿನ ಸುದ್ದಿ