ಸಮುದ್ರ ತೀರದಲ್ಲಿ ವಿಶ್ರಾಂತಿ ಪಡೆಯುತಿದ್ದ ಅಮೇರಿಕನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಸಮುದ್ರ ತೀರದಲ್ಲಿ ವಿಶ್ರಾಂತಿ ಪಡೆಯುತಿದ್ದ ಅಮೇರಿಕನ್ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಮಹಿಳೆಯು ಕಡಲತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾಗ ಇಬ್ಬರು ಪುರುಷರು ಆಕೆಯ ಬಳಿಗೆ ಬಂದು ಸಿಗರೇಟ್ ನೀಡಿದರು. ಆದರೆ ಮಹಿಳೆ ಸಿಗರೇಟ್ ನಿರಾಕರಿಸಿದಾಗ ಮದ್ಯವನ್ನು ನೀಡಿದರು ಎನ್ನಲಾಗಿದೆ.
ಮದ್ಯ ಸೇವಿಸಿದ ನಂತರ ಮಹಿಳೆ ನಶೆಯಲ್ಲಿದ್ದರು. ಇದೇ ಸಮಯವನ್ನು ಬಳಸಿಕೊಂಡ ಕಾಮುಕರು, ಆಕೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹತ್ತಿರದ ಖಾಲಿ ಮನೆಗೆ ಹೊಗಿ, ಆಕೆ ಸಾಮೂಹಿಕ ಅತ್ಯಾಚಾರವೆಸಗಿದರು.
ಈ ಘಟನೆಯ ಬಳಿಕ ಮಹಿಳೆ ಆಗಸ್ಟ್ 1ರ ರಾತ್ರಿ ಮಹಿಳೆ ದೂರು ನೀಡಿದ್ದು ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw