ಕರ್ತವ್ಯದ ಸಮಯದಲ್ಲಿ ಕ್ಯಾಂಡಿ ಕ್ರಶ್ ಆಡಿದ ಶಿಕ್ಷಕ: ಅಧಿಕಾರಿಗಳ ತಪಾಸಣೆ ವೇಳೆ ಮಕ್ಕಳಾಟಿಕೆ ಬಯಲು..!
ಒಂದು ಕಡೆ ಉತ್ತರ ಪ್ರದೇಶದ ಸರ್ಕಾರಿ ಶಿಕ್ಷಕರು ತಮ್ಮ ಡಿಜಿಟಲ್ ಹಾಜರಾತಿಯನ್ನು ಜಾರಿಗೆ ತರುವ ರಾಜ್ಯದ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಬಹುದು. ಬೆಳಿಗ್ಗೆ 8.30 ರೊಳಗೆ ಹಾಜರಾತಿಯನ್ನು ತಿಳಿಸಬೇಕು ಎಂಬ ನಿಯಮಕ್ಕೆ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ಜೊತೆಗೆ ವೇತನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳನ್ನು ಮೊದಲು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಇನ್ನು ಈ ಹಾಜರಾತಿ ವಿವಾದದ ಮಧ್ಯೆ, ಸಂಭಾಲ್ ಡಿಎಂ ರಾಜೇಂದರ್ ಪೆನ್ಸಿಯಾ ಸರ್ಕಾರಿ ಶಾಲೆಗೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ನಡೆಸಿದರು.
ತಪಾಸಣೆಯ ಸಮಯದಲ್ಲಿ ಎಲ್ಲಾ ಸಿಬ್ಬಂದಿ ಹಾಜರಿದ್ದಾಗ ಶಿಕ್ಷಕರೊಬ್ಬರು ಕ್ಯಾಂಡಿ ಕ್ರಶ್ ಆಟಗಳನ್ನು ಆಡಲು ಮತ್ತು ತಮ್ಮ ಮೊಬೈಲ್ ಬಳಸಲು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು.
ಸಂಭಾಲ್ ನ ಶರೀಫ್ಪುರ ಗ್ರಾಮದ ಸರ್ಕಾರಿ ಶಾಲೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅನಿರೀಕ್ಷಿತ ಭೇಟಿ ನೀಡಿ ಶಿಕ್ಷಕರ ಬೋಧನಾ ವಿಧಾನಗಳನ್ನು ವೀಕ್ಷಿಸಿದರು. ಅವರ ಕಲಿಕೆಯ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದರು. ಇದೇ ವೇಳೆ ಶಿಕ್ಷಕರು ಪರಿಶೀಲಿಸಿದ ಮನೆಕೆಲಸ ನೋಟ್ ಬುಕ್ ಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿದರು. ಡಿಎಂ ಆರು ವಿದ್ಯಾರ್ಥಿಗಳ ನೋಟ್ ಬುಕ್‌ಗಳಿಂದ ಆರು ಪುಟಗಳನ್ನು ಪರಿಶೀಲಿಸಿದಾಗ ಶಿಕ್ಷಕರು ಈಗಾಗಲೇ ಪರಿಶೀಲಿಸಿದ ಪುಟಗಳಲ್ಲಿ 95 ದೋಷಗಳನ್ನು ಕಂಡುಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth