ಉಪಚುನಾವಣೆ ವೇಳೆ ಅಧಿಕಾರಿಗೆ ಕಪಾಳಮೋಕ್ಷ: ಪಕ್ಷೇತರ ಅಭ್ಯರ್ಥಿಯ ಬಂಧನ
ರಾಜಸ್ಥಾನದ ತೊಂಕ್ ಜಿಲ್ಲೆಯಲ್ಲಿ ಬುಧವಾರ ನಡೆದ ಉಪ ಚುನಾವಣೆ ವೇಳೆ ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾರನ್ನು ಬಂಧಿಸಲಾಗಿದ್ದು, ಇದೀಗ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲುಗಳನ್ನು ತೂರಿದ್ದಾರೆ . ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ರಾಜಸ್ಥಾನದಲ್ಲಿ ನವೆಂಬರ್ 13 ರಂದು ಮತದಾನ ನಡೆದ ಏಳು ವಿಧಾನಸಭಾ ಸ್ಥಾನಗಳಲ್ಲಿ ದೇವಲ್ ಉನಿಯಾರಾ ಸ್ಥಾನವೂ ಸೇರಿದೆ. ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಕೂಡ ಸ್ಪರ್ಧಿಸಿದ್ದಾರೆ. ಸಮ್ರಾವತ ಗ್ರಾಮವು ದೇವಲ್ ಉನಿಯಾರ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಇಲ್ಲಿನ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರು. ಈ ಸುದ್ದಿ ತಿಳಿದ ಎಸ್‌ಡಿಎಂ ಅಮಿತ್ ಚೌಧರಿ ಅವರು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರಿಗೆ ವಿವರಿಸಲು ಆರಂಭಿಸಿದರು.
ಈ ವೇಳೆ ನರೇಶ್ ಮೀನಾ ಕೂಡ ಅಲ್ಲಿಗೆ ಆಗಮಿಸಿ ಎಸ್‌ಡಿಎಂ ಅಮಿತ್ ಚೌಧರಿ ಜತೆ ವಾಗ್ವಾದ ನಡೆಸಿದರು. ಈ ವೇಳೆ ನರೇಶ್ ಮೀನಾ ಅವರು ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಧಿಕಾರಿ ಮೇಲೆ ಅವರು ಕೈ ಮಾಡುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನಾ ಅವರನ್ನು ಬಂಧಿಸಲು ಬುಧವಾರ ಪೊಲೀಸರು ಮುಂದಾದಾಗ ಸಮ್ರವತಾ ಗ್ರಾಮದಲ್ಲಿ ರಾತ್ರಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj