ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಅಂತ ಅಮಿತ್ ಶಾ ಹೇಳಿದ್ದಾರೆ: ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ

ಚಿಕ್ಕಮಗಳೂರು: ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಿರುವಾಗ ಹೊಂದಾಣಿಕೆ ಎಲ್ಲಿಂದ, ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಕಳೆದ ಬಾರಿ ಕೂಡ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಹೊಂದಾಣಿಕೆಯಾಗಿದ್ರೆ, ಹೆಚ್ ಡಿಕೆ ವಿರುದ್ಧ ಯೋಗೀಶ್ವರ್ ಸ್ಪರ್ಧೆ ಮಾಡ್ತಿರಲಿಲ್ಲ. ನನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತ ತೆಗೆದುಕೊಂಡರು, ಹೊಂದಾಣಿಕೆ ಮಾಡಿದ್ರೆ ಅಷ್ಟು ಮತಗಳನ್ನು ತೆಗೆದುಕೊಳ್ತಿದ್ರಾ? ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತೆ ಎಂದು ಅವರು ಹೇಳಿದರು.
ವರುಣಾದಲ್ಲಿ ಸಿದ್ದು ವಿರುದ್ಧ ಬಿಜೆಪಿಯಿಂದ ಯಾರು ಸ್ಪರ್ಧಿ ಅನ್ನೋದನ್ನು ಪಾರ್ಲಿಮೆಂಟರಿ ಬೋರ್ಡ್ ಸಿದ್ಧ ಮಾಡುತ್ತೆ. ನಾವು ಯಾರ ವಿರುದ್ಧ ಅಂತಿಲ್ಲ, ನಾವು ಬಿಜೆಪಿ ಪರ ಅಷ್ಟೆ. ನಮ್ಮದು ವೈಚಾರಿಕ ರಾಜಕೀಯ ಪಕ್ಷ. ನಮ್ಮ ಪಕ್ಷದ ವಿಚಾರವನ್ನ ಬೆಳೆಸೋದಷ್ಟೆ ನಮ್ಮ ಗುರಿ. ನಮ್ಮದು ನಕಾರಾತ್ಮಕ ರಾಜಕೀಯ ಅಲ್ಲ, ಸಕಾರಾತ್ಮಕ ರಾಜಕೀಯ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw