ಅಮಿತ್ ಶಾ ಇದ್ದ ಚುನಾವಣಾ ಪ್ರಚಾರ ರಥಕ್ಕೆ ವಿದ್ಯುತ್ ಸ್ಪರ್ಶ!
08/11/2023
ಜೈಪುರ: ರಾಜಸ್ಥಾನ ವಿಧಾನ ಸಭಾ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗೃಹ ಸಚಿವ ಅಮಿತ್ ಶಾ ಅವರಿದ್ದ ರಥಕ್ಕೆ ವಿದ್ಯುತ್ ತಗುಲಿದ ಘಟನೆ ನಡೆದಿದ್ದು, ಅಮಿತ್ ಶಾ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ರಾಜಸ್ಥಾನದ ನಾಗೌರ್ ನಲ್ಲಿ ಅಮಿತ್ ಶಾ ರಥದಲ್ಲಿ ನಿಂತು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಥದ ಮೇಲ್ಭಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ.
ವಿದ್ಯುತ್ ಸ್ಪರ್ಶದಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ, ಬಳಿಕ ಅಮಿತ್ ಶಾ ಬೇರೊಂದು ವಾಹನದ ಮೂಲಕ ಪರ್ಬತ್ಸರ್ ಗೆ ತೆರಳಿದ್ದು, ಸಮಾವೇಶದಲ್ಲಿ ಭಾಗವಹಿಸಿದರು.
ರಾಜಸ್ಥಾನದಲ್ಲಿ ನವೆಂಬರ್ 25ರಂದು ವಿಧಾನ ಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್ 5ರಂದು ಮತ ಎಣಿಕೆ ನಡೆಯಲಿದೆ.