ಅಂಬೇಡ್ಕರ್ ಯಾವ ಪುಸ್ತಕ ಸುಟ್ಟರು? ಎಂಬ ಪ್ರಶ್ನೆಗೆ ಉರಿದು ಹೋದ ಮನುಸಂತಾನಗಳು | ಅಮಿತಾಭ್ ಬಚ್ಚನ್ ವಿರುದ್ಧದ ದೂರಿಗೆ ತಿರುಗೇಟು ನೀಡಿದ ನೆಟ್ಟಿಗರು - Mahanayaka
3:05 AM Wednesday 11 - December 2024

ಅಂಬೇಡ್ಕರ್ ಯಾವ ಪುಸ್ತಕ ಸುಟ್ಟರು? ಎಂಬ ಪ್ರಶ್ನೆಗೆ ಉರಿದು ಹೋದ ಮನುಸಂತಾನಗಳು | ಅಮಿತಾಭ್ ಬಚ್ಚನ್ ವಿರುದ್ಧದ ದೂರಿಗೆ ತಿರುಗೇಟು ನೀಡಿದ ನೆಟ್ಟಿಗರು

03/11/2020

ಮುಂಬೈ: “ಡಿಸೆಂಬರ್ 25, 1927ರಲ್ಲಿ ಬಿ. ಆರ್. ಅಂಬೇಡ್ಕರ್ ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟರು?” ಎಂಬ ಪ್ರಶ್ನೆಯನ್ನು ಅಮಿತಾಬ್ ಬಚ್ಚನ್ ಅವರು ತಮ್ಮ ಜನಪ್ರಿಯ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಕೇಳಿದ್ದಕ್ಕೆ ಮನುವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಿರುಗೇಟು ನೀಡಿದ್ದಾರೆ.



ಡಿಸೆಂಬರ್ 25, 1927ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು, ಸಮಾಜಕ್ಕೆ ಅನಿಷ್ಠವಾಗಿದ್ದ ಮತ್ತು, ಜಾತಿ ವ್ಯವಸ್ಥೆ ಎಂಬ ವ್ಯಸನವನ್ನು ಜನರಿಗೆ ಹತ್ತಿಸಲು ಕಾರಣವಾಗಿದ್ದ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಅಮಿತಾಬ್ ಬಚ್ಚನ್ ಅವರು ಕೇಳಿದ ಪ್ರಶ್ನೆಯನ್ನು ವಿರೋಧಿ ಲಕ್ನೋದಲ್ಲಿ ಮನುಸಂತಾನದ ವ್ಯಕ್ತಿಯೊಬ್ಬ ದೂರು ದಾಖಲಿಸಿದ್ದಾನೆ.


ಅಂಬೇಡ್ಕರ್ ಅವರು ಇರುವ ಕಾರಣದಿಂದಾಗಿ ಮತ್ತು ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಕಾರಣ ಇಂದಿಗೂ ನಾವು ನೆಮ್ಮದಿಯಿಂದ ಇದ್ದೇವೆ. ಇಂತಹದ್ದೊಂದು ಹೊಲಸು ಮತ್ತು ಮಾನವೀಯತೆಯೇ ಇಲ್ಲದ ವ್ಯವಸ್ಥೆಯನ್ನು ವಿರೋಧಿಸುವ ಪುಸ್ತಕವನ್ನು ಸುಟ್ಟಿರುವುದು ಒಳ್ಳೆಯ ವಿಚಾರವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.


ಅಂಬೇಡ್ಕರ್ ಅವರು ಭಾರತಕ್ಕೆ ಸಮಾನತೆ ಮತ್ತು ಬ್ರಾತೃತ್ವ ನೀಡಿದ್ದಾರೆ. ಆದರೆ ಮನುವಾದವು ದ್ವೇಷ, ತಾರತಮ್ಯ, ಹಿಂಸೆಗಳಿಂದ ಕೂಡಿದೆ ಎಂದು ನೆಟ್ಟಿಗರು ಮನುಸಂತಾನಗಳಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಫ್ರಾನ್ಸ್ ನಲ್ಲಿ ವಾಕ್ ಸ್ವಾತಂತ್ರ್ಯ ಎಂದು ಬೊಬ್ಬೆ ಹೊಡೆಯುವ ಮನುಸಂತಾನಗಳು ಭಾರತದಲ್ಲಿ ಮನುಸ್ಕೃತಿ ಪರ ವಾದಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.


ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ
https://chat.whatsapp.com/HeAiP3WAQfT6ajtrJVJ4kP

ಇತ್ತೀಚಿನ ಸುದ್ದಿ