“ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ” | ಶಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದ ಸಚಿವ ಈಶ್ವರಪ್ಪ! - Mahanayaka
9:28 AM Wednesday 5 - February 2025

“ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ” | ಶಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದ ಸಚಿವ ಈಶ್ವರಪ್ಪ!

amith shah eshwarappa
03/09/2021

ಶಿವಮೊಗ್ಗ: ಅಮಿತ್ ಶಾ ಯಾವ ಅರ್ಥದಲ್ಲಿ “ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ” ಎಂದು ಹೇಳಿದ್ದಾರೆಯೋ ಗೊತ್ತಿಲ್ಲ. ಆದರೆ,  ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ನಾಯಕರಿಗೆ ಒಲವಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಪಾತ್ರವೂ ಇರುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿಯೇ ನಡೆಯುತ್ತದೆ ಎಂದು ಅವರು ಅಮಿತ್ ಶಾ ಹೇಳಿಕೆಯನ್ನು ತಳ್ಳಿ ಹಾಕಿದರು.

ಕರ್ನಾಟಕದಲ್ಲಿ ಮತ್ತೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಏಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಲು ಬಹುತೇಕ ನಾಯಕರಿಗೆ ಇಷ್ಟವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಕೆ.ಎಸ್.ಈಶ್ವರಪ್ಪನವರೇ ಹೇಳಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮುಂದಿನ ಬಾರಿಯಾದರೂ ಬಹುಮತದ ಸರ್ಕಾರ ತರಬೇಕು ಎನ್ನುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಈ ನಡುವೆ ಸಿಎಂ ಆಗುವ ಕನಸನ್ನು ಬಹಳಷ್ಟು ನಾಯಕರು ಕಾಣುತ್ತಿದ್ದಾರೆ. ಹೀಗಾಗಿ ಸಾಮೂಹಿಕ ನಾಯಕತ್ವದ ಬಗ್ಗೆ ಬಿಜೆಪಿಯಲ್ಲಿ ಹೆಚ್ಚಿನ ಒಲವಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸುದ್ದಿಗಳು…

ಜಿಂಕೆಯನ್ನು ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳಿಂದ ಗುಂಡಿನ ದಾಳಿ!

“ನಾವು ತಯಾರಾಗಿದ್ದೇವೆ ಎನ್.ಇ.ಪಿ ಬಗ್ಗೆ ಚರ್ಚೆಗೆ ನೀವು ತಯಾರಾಗಿದ್ದೀರಾ?”: ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನ

ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋರೂಂ ಉದ್ಘಾಟಿಸಿದ ಸಚಿವ! | ಜಗತ್ತಿನಲ್ಲೇ ಇದು ಮೊದಲು!

ಟೋಯಿಂಗ್ ಮಾಡುವಾಗ ವಾಹನ ಮಾಲಿಕ ಸ್ಥಳದಲ್ಲೇ ಇದ್ದರೆ, ನೋ ಪಾರ್ಕಿಂಗ್ ಶುಲ್ಕ ಪಡೆದು ವಾಹನ ಬಿಟ್ಟುಕೊಡಬೇಕು | ಸಚಿವ ಆರಗ ಜ್ಞಾನೇಂದ್ರ ಸೂಚನೆ

ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?

ಪಬ್ ನಲ್ಲಿ ಅಪ್ರಾಪ್ತ ಬಾಲಕಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್: ಪಬ್ ಮ್ಯಾನೇಜ್ ಮೆಂಟ್ ಗೆ ಸಂಕಷ್ಟ!

ಮಹಿಳೆ ಜೊತೆಗೆ ಅಕ್ರಮ ಸಂಬಂಧ: ಕಾನ್‌ ಸ್ಟೇಬಲ್‌ ನ  ಕೈ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿತ

ಇತ್ತೀಚಿನ ಸುದ್ದಿ