ಅಮಿತ್ ಶಾ ಎದುರು ನಡುಬಗ್ಗಿಸಿ ನಿಲ್ಲಲು ಸದನ ಮೊಟಕು: ಸಿದ್ದರಾಮಯ್ಯ ಕಿಡಿ - Mahanayaka
5:59 AM Thursday 12 - December 2024

ಅಮಿತ್ ಶಾ ಎದುರು ನಡುಬಗ್ಗಿಸಿ ನಿಲ್ಲಲು ಸದನ ಮೊಟಕು: ಸಿದ್ದರಾಮಯ್ಯ ಕಿಡಿ

siddaramayya
29/12/2022

ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ ಸದನವನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಿಲುವು ನಾಡವಿರೋಧಿಯಾದುದ್ದು.ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ ಎಂದು ಅವರು ಹೇಳಿದ್ದಾರೆ.

ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನ ಸಾವು ಇಂಥಾ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಅಮಿತ್ ಶಾ ಅವರ ಕೃಪಾಕಟಾಕ್ಷ ಮಾತ್ರ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

 

ಇತ್ತೀಚಿನ ಸುದ್ದಿ