ಅಮ್ಮ ಪ್ರತೀ ದಿನ ಜಗಳವಾಡುತ್ತಾಳೆ ಎಂದು ಕೊಂದ ಪುತ್ರ | ಹೆತ್ತವಳ ಕತ್ತು ಹಿಸುಕಿದ ಪುತ್ರ
ಮುಂಬೈ: ಮಕ್ಕಳೊಂದಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರನ್ನು ಹದಿಹರೆಯದ ಪುತ್ರನೇ ಹತ್ಯೆ ಮಾಡಿರುವ ಅಮಾನವೀಯ ಘಟನೆ ಮುಂಬೈನ ವಸೈ(ಪಶ್ಚಿಮ)ನಲ್ಲಿ ನಡೆದಿದ್ದು, ಆರೋಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿ ಪದೇ ಪದೇ ಜಗಳ ಮಾಡುತ್ತಿದ್ದಾಳೆ ಎಂದು ಕೋಪಗೊಂಡು ಪುತ್ರ ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ. ಹತ್ಯೆಗೀಡಾದ ಮಹಿಳೆಯು ತನ್ನ ಪುತ್ರ ಹಾಗೂ ಪುತ್ರಿಯ ಜೊತೆಗೆ ಪ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಕಳೆದ ವರ್ಷ ಮಹಿಳೆಯ ಪತಿ ನಿಧನರಾಗಿದ್ದು, ಪತಿಯ ನಿಧನದ ಬಳಿಕ ತಾಯಿಯು ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಪ್ರತೀ ದಿನ ಮಕ್ಕಳೊಂದಿಗೆ ಜಗಳವಾಡುತ್ತಿದ್ದಳು ಎಂದು ಹೇಳಲಾಗಿದೆ. ಮಂಗಳವಾರ ಕೂಡ ಮಹಿಳೆಯು ತನ್ನ ಮಕ್ಕಳ ಜೊತೆಗೆ ಜಗಳವಾಡಿದ್ದಾಳೆ.
ಈ ವೇಳೆ ಮಹಿಳೆಯ ಪುತ್ರ, ತನ್ನ ಸಹೋದರಿಯನ್ನು ಮನೆಯಿಂದ ಹೊರಕ್ಕೆ ಕಳುಹಿಸಿ, ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಚರ್ಮದ ಬೆಲ್ಟ್ ನಿಂದ ತಾಯಿಯ ಕುತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಾಲಕ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ವಲಯ ಡಿಸಿಪಿ ಸಂಜಯ್ ಕುಮಾರ್ ಪಾಟೀಲ್ ತಿಳಿಸಿದ್ದು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಚೈತ್ರಾ ಕೋಟೂರ್ ಸನ್ಯಾಸಿನಿ ಆಗಿದ್ದು ನಿಜವೇ? | ಅಸಲಿಗೆ ನಡೆದದ್ದೇನು?
ಈಗ ಅವಕಾಶವಿದೆ, ದಲಿತ ಸಿಎಂ ಮಾಡಿ ತೋರಿಸಿ | ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಬಂದಿತ್ತು ಪ್ರವಾಹ | ನೀರಲ್ಲಿ ಕೊಚ್ಚಿ ಹೋದ ಯುವಕ ಬದುಕಿದ್ದು ಹೇಗೆ?
ಸಿದ್ದಲಿಂಗ ಶ್ರೀಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಯಾಗಬಾರದು | ಹೆಚ್.ವಿಶ್ವನಾಥ್