ಅಮ್ಮನ ಗೋಳಾಟ ಕೇಳಿ ಎಚ್ಚೆತ್ತ ಸತ್ತು ಹೋಗಿದ್ದ ಮಗ! | ಅಂತ್ಯಕ್ರಿಯೆಗೆ ಸಿದ್ಧವಾಗುವಾಗಲೇ ನಡೆದಿತ್ತು ಅಚ್ಚರಿ!
ಹರ್ಯಾಣ: ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದು, ಆದರೆ, ವಿಜ್ಞಾನಕ್ಕೆ ಸವಾಲು ಎಂಬಂತೆ ಮಗು ಮತ್ತೆ ಬದುಕಿದ ಘಟನೆ ಹರ್ಯಾಣದ ಜಜ್ಜಾರ್ ಜಿಲ್ಲೆಯಲ್ಲಿ ನಡೆದಿದೆ.
ಹಿತೇಶ್ ಎಂಬವರ 7 ವರ್ಷ ವಯಸ್ಸಿನ ಮಗ ಕುನಾಲ್ ಶರ್ಮಾಗೆ ಟೈಫಾಯಿಡ್ ಜ್ವರ ಕಾಣಿಸಿಕೊಂಡಿತ್ತು. ತೀವ್ರವಾಗಿ ಅಸ್ವಸ್ಥನಾದ ಕುನಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಕುನಾಲ್ ಮೃತಪಟ್ಟಿರುವುದಾಗಿ ಘೋಷಿಸಿದ ವೈದ್ಯರು ಆತನನ್ನು ಪೋಷಕರಿಗೆ ಹಸ್ತಾಂತರಿಸಿದ್ದರು.
ಇತ್ತ ಮಗು ಸತ್ತಿದೆ ಅಂದು ಕೊಂಡು ಪೋಷಕರು ಅಂತ್ಯಕ್ರಿಯೆಗೆ ಸಜ್ಜಾಗಿದ್ದಾರೆ. ಮಗುವಿನ ದೇಹದ ಮೇಲೆ ಬಿದ್ದು ತಾಯಿ ಗೋಳಾಡಲು ಆರಂಭಿಸಿದ್ದು, ಅದೇ ಸಂದರ್ಭದಲ್ಲಿ ಮಗುವಿನ ದೇಹದಲ್ಲಿ ಚಲನೆ ಕಾಣಿಸಿಕೊಂಡಿದೆ. ಮಗು ಉಸಿರಾಡುತ್ತಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ ತಕ್ಷಣವೇ ಮಗುವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು, ಈ ರೀತಿ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಕೇವಲ ಶೇ.15ರಷ್ಟು ಮಾತ್ರವೇ ಇರುತ್ತದೆ ಎಂದು ತಿಳಿಸಿದರು. ಹೀಗೆ ಸತತ 20 ದಿನಗಳ ಕಾಲ ಬಾಲಕನಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗಿತು. ಕೊನೆಗೂ ಜೂ.15ರಂದು ಕುನಾಲ್ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ.