ಆರ್ಯ ಯಾನೆ ಮರಾಠ ಸಮಾಜ ಸಂಘದಿಂದ ಅಮೃತ ಭಾರತಿಗೆ ಸಮುದಾಯದಾರತಿ ವಿಶೇಷ ಕಾರ್ಯಕ್ರಮ
ಮಂಗಳೂರು: ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಸಮುದಾಯದಾರತಿ ವಿಶೇಷ ಕಾರ್ಯಕ್ರಮ ಆಗಸ್ಟ್ 7 ರಂದು ಆರ್ಯ ಮರಾಠ ಭವನ ಜಪ್ಪಿನಮೊಗರುವಿನಲ್ಲಿ ನಡೆಯಲಿದೆ ಎಂದು ಪ್ರದೀಪ್ ಜಾದವಂ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ವೀರರತ್ನ ದಿ.ಮೇಜರ್ ಕೆ.ಕೆ.ರಾವ್ ರವರ ಗೌರವ ಸಂಸ್ಮರಣಾ ಕಾರ್ಯಕ್ರಮವೂ ಈ ಸಂದರ್ಭ ನೆರವೇರಲಿದೆ. ನುಡಿನಮನ, ಪುಷ್ಪಾರ್ಚನೆ, ಗೀತನಮನ, ಸಾಕ್ಷ್ಯಚಿತ್ರ ಪ್ರದರ್ಶನ, ಗೌರವಾಭಿನಂದನೆ ಇತ್ಯಾದಿ ಕಾರ್ಯಕ್ರಮವನ್ನು ಜೋಡಿಸಲಾಗಿದೆ. ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನಿವೃತ್ತ ಸೇನಾಧಿಕಾರಿ ಕರ್ನಲ್ ಎನ್.ಶರತ್ ಭಂಡಾರಿ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಸಂಘದ ಅಧ್ಯಕ್ಷ ಮುಳ್ಳಂಗೋಡು ವಾಮನ ರಾವ್ ವಾಗ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡುವರು. ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಸಮುದಾಯದ ಮೇಜರ್ ಕೆ.ಕೆ.ರಾವ್ ಅವರಿಗೆ ಪ್ರಧಾನ ಮಂತ್ರಿಗಳ ಹಸ್ತಾಕ್ಷರವಿರುವ ಸ್ಮರಣಿಕೆ ಲಭಿಸಿದ ಹಿನ್ನೆಲೆಯಲ್ಲಿ ಗೌರವ ಸಂಸ್ಮರಣೆ ಕಾರ್ಯಕ್ರಮ ಸಾಗಲಿದ್ದು, ಪ್ರಸ್ತುತ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾಗಿರುವ ಹಾಗೂ ಮೃತಪಟ್ಟ ಸಮುದಾಯದ ಯೋಧರಿಗೆ ಗೌರವಾಭಿನಂದನೆ ಕೂಡ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ವಾಮನ್ ರಾವ್ ವಾಗ್ಮಾನ್ ಮುಳ್ಳಂಗೋಡು, ಕೋಶಾಧಿಕಾರಿ ಮೋಹನ್ ರಾವ್ ಭೊಂಸ್ಲೆ, ಸಂಚಾಲಕ ಸಚಿನ್ ಮೋರೆ, ಮಹಿಳಾ ಘಟಕದ ಅಧ್ಯಕ್ಷರಾದ ಪೂರ್ಣಿಮಾ ಚಂದ್ರಮಾನ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka