ಶಾಲೆ ನಿರ್ಮಾಣಕ್ಕಾಗಿ ತೆಗೆದಿಟ್ಟಿದ್ದ ಇಂಗು ಗುಂಡಿಗೆ ಬಿದ್ದು 8 ವರ್ಷದ ಬಾಲಕ ದುರ್ಮರಣ - Mahanayaka
2:11 AM Thursday 12 - December 2024

ಶಾಲೆ ನಿರ್ಮಾಣಕ್ಕಾಗಿ ತೆಗೆದಿಟ್ಟಿದ್ದ ಇಂಗು ಗುಂಡಿಗೆ ಬಿದ್ದು 8 ವರ್ಷದ ಬಾಲಕ ದುರ್ಮರಣ

chikkamagaluru
06/08/2023

ಚಿಕ್ಕಮಗಳೂರು: ಶಾಲೆ ನಿರ್ಮಾಣಕ್ಕಾಗಿ ಮಳೆ ನೀರು ಇಂಗಿಸಲು ಮಾಡಿಟ್ಟಿದ್ದ ಗುಂಡಿಗೆ ಬಿದ್ದ 8 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ  ನಡೆದಿದೆ.

ಅಶರ್ ಡಿ ಗುನ್ನಾ (8) ಮೃತಪಟ್ಟ ಬಾಲಕನಾಗಿದ್ದಾನೆ. ಹೊಸದಾಗಿ ನಿರ್ಮಾಣವಾಗುತ್ತಿದ್ದ ಮೊರಾರ್ಜಿ ದೇಸಾಯಿ ಶಾಲೆಯ ಕಾಮಗಾರಿಗಾಗಿ ಮಳೆ ನೀರನ್ನು ಇಂಗಿಸಲು ಗುತ್ತಿಗೆದಾರರು ಗುಂಡಿ ತೆಗೆದಿದ್ದರು. ಈ ಗುಂಡಿಗೆ ಬಿದ್ದ ಬಾಲಕ ಸಾವನ್ನಪ್ಪಿದ್ದಾನೆ.

ಶಾಲೆ ಕಟ್ಟಲು ಟ್ಯಾಂಕ್ ಅಥವ ಅಂಡರ್ ಗ್ರೌಂಡ್ ಟ್ಯಾಂಕ್ ನಿರ್ಮಾಣ ಮಾಡಬೇಕು, ಆದರೆ ಫೀಲ್ಡ್ ಪಕ್ಕದಲ್ಲೇ ಇಂಗು ಗುಂಡಿ ನಿರ್ಮಾಣ ಮಾಡಿದ್ದರಿಂದ  ಈ ಅವಘಡ ಸಂಭವಿಸಿದೆ. ಗುತ್ತಿಗೆದಾರರೇ ಈ ಘಟನೆಗೆ ನೇರಕಾರಣವಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ