ದೇಗುಲದ ಬಳಿ ಮಲಗಿದ್ದ ಬಾಲಕರ ಮೇಲೆ ಆನೆ ದಾಳಿ! - Mahanayaka

ದೇಗುಲದ ಬಳಿ ಮಲಗಿದ್ದ ಬಾಲಕರ ಮೇಲೆ ಆನೆ ದಾಳಿ!

chamarajanagara
19/04/2023

ಚಾಮರಾಜನಗರ: ದೇವಾಲಯದ ಬಳಿ ಮಲಗಿದ್ದ ನಾಲ್ವರು ಬಾಲಕರ ಮೇಲೆ ಆನೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪದ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಣಿಕಂಠ(17) ಅರಸ(12) ಸ್ವಾಮಿ(11) ಹಾಗೂ ಅಭಿ(12) ಗಾಯಗೊಂಡ ಬಾಲಕರಾಗಿದ್ದು ಎಲ್ಲರನ್ನೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಜಡೇಸ್ವಾಮಿ ದೇವಾಲಯದ ಜಾತ್ರೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ  ದೇವಸ್ಥಾನದ ಮುಂದೆ ಚಪ್ಪರ ಹಾಕಿ ಗ್ರಾಮಸ್ಥರು ಜಾತ್ರೆಗೆ ಸಿದ್ದತೆ ನಡೆಸುತ್ತಿದ್ದರು. ದೇವಾಲಯದ ಕೆಲಸ‌ ಮುಗಿಸಿ 20ಕ್ಕೂ ಹೆಚ್ಚು ಗ್ರಾಮಸ್ಥರು ಜೊತೆ ಈ ಬಾಲಕರು ಮಲಗಿದ್ದರು.


Provided by

ದಿಢೀರನೇ ಆನೆಯೊಂದು ದಾಳಿ ಮಾಡಿದ್ದು ದೇಗುಲಕ್ಕೆ ಹಾಕಿದ್ದ ಚಪ್ಪರ ದ್ವಂಸ ಮಾಡಿ ಮಲಗಿದ್ದವರ ಮೇಲೆ ಆನೆ ದಾಳಿ  ಮಾಡಿದ್ದು ಈ ವೇಳೆ ನಾಲ್ವರು ಬಾಲಕರು ಗಾಯಗೊಂಡಿದ್ದಾರೆ.  ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ