ಕಂತೆ ಕಂತೆ ಹಣದ ಮುಂದೆ ಬಾಜಿಗೆ ಆಹ್ವಾನ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ - Mahanayaka

ಕಂತೆ ಕಂತೆ ಹಣದ ಮುಂದೆ ಬಾಜಿಗೆ ಆಹ್ವಾನ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ

kollegala
12/05/2023

ಚಾಮರಾಜನಗರ:‌ ತಮ್ಮಿಚ್ಛೆಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಹುಮ್ಮಸಿನಲ್ಲಿ ಲಕ್ಷ-ಲಕ್ಷ ಹಣ ಹಿಡಿದು ಬಾಜಿಗೆ ಆಹ್ವಾನಿಸಿದ ಇಬ್ಬರಿಗೆ ಖಾಕಿ ಬಿಸಿ ಮುಟ್ಟಿಸಿ ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಹಣ ಹಿಡಿದು ಪಂಥಕ್ಕೆ ಆಹ್ವಾನಿಸಿದ ಕೊಳ್ಳೇಗಾಲ ತಾಲೂಕು ಬಸ್ತಿಪುರ ಗ್ರಾಮದ ಮಲ್ಲೇಶ್ ಹಾಗೂ ಬಾಜಿ ವೀಡಿಯೋ ಮಾಡಿದ್ದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ ತರಕಾರಿ ವ್ಯಾಪಾರಿಯಾಗಿದ್ದು 8 ಲಕ್ಷ ರೂ. ಹಣದ ಕಂತೆ ಮುಂದೆ ಪಂಥಕ್ಕೆ ಆಹ್ವಾನಿಸಿದ್ದರು.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಮೂರು ಲಕ್ಷ, ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ 3 ಲಕ್ಷ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರವಾಗಿ‌ 2 ಲಕ್ಷ ಹಣ ಕಟ್ಟುತ್ತೇನೆ, ಬನ್ನಿ ಬಾಜಿ ಕಟ್ಟಿ ಎಂದು ಮಲ್ಲೇಶ್ ಆಹ್ವಾನಿಸಿದ್ದರು.

ಚುನಾವಣಾ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಜೂಜಾಟಕ್ಕೆ ಪ್ರಚೋದನೆ ನೀಡಿದ್ದಾರೆಂದು ಇಬ್ಬರನ್ನು ಬಂಧಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ