ಅನಾರೋಗ್ಯ ಈ ಕುಟುಂಬದ ನೆಮ್ಮದಿ ಕಿತ್ತುಕೊಂಡಿತು: ನಿಮ್ಮ ನೆರವಿನ ನಿರೀಕ್ಷೆಯಲ್ಲಿ ಕುಟುಂಬ - Mahanayaka

ಅನಾರೋಗ್ಯ ಈ ಕುಟುಂಬದ ನೆಮ್ಮದಿ ಕಿತ್ತುಕೊಂಡಿತು: ನಿಮ್ಮ ನೆರವಿನ ನಿರೀಕ್ಷೆಯಲ್ಲಿ ಕುಟುಂಬ

manjanady
21/09/2022

ಮಂಗಳೂರು: ಬಡ ಕುಟುಂಬವಾಗಿದ್ದರೂ ಕಷ್ಟಪಟ್ಟು ದುಡಿದು ಬದುಕುತ್ತಿದ್ದ ಆ ಕುಟುಂಬಕ್ಕೆ ಅನಿರೀಕ್ಷಿತವಾಗಿ ಸಂಕಷ್ಟ ಎದುರಾಗಿತ್ತು. ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಮಂಜನಾಡಿ ಗ್ರಾಮದ ಮೊಂಟೆಪದವು ನಿವಾಸಿ ಸಂತೋಷ್ ಎಂಬವರು ಸದ್ಯ ಕಷ್ಟದ ಪರಿಸ್ಥಿತಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಮನೆಯ ಆಧಾರ ಸ್ತಂಭವಾಗಿದ್ದ ಸಂತೋಷ್ ಅವರು ಅನಾರೋಗ್ಯದಿಂದಾಗಿ 6 ವರ್ಷಗಳಿಂದ ದುಡಿಯಲು ಸಾಧ್ಯವಾಗದೇ ಮನೆಯಲ್ಲೇ ದಿನಕಳೆಯುವಂತಾಗಿದ್ದು, ಕುಟುಂಬ ಆರ್ಥಿಕ ಸ್ಥಿತಿಯನ್ನು ಹೇಳತೀರದಂತಾಗಿದೆ.

ಪ್ಯಾನಿಕ್ ಡಿಸಾರ್ಡರ್ (ಆತಂಕದ ಅಸ್ವಸ್ಥತೆ) ಎಂಬ ಅನಾರೋಗ್ಯದಿಂದ ಬಳಲುತ್ತಿರುವ ಸಂತೋಷ್ ಅವರು ಮನೆಯಿಂದ ಹೊರ ಹೋಗಿ ದುಡಿಯುವ ಸ್ಥಿತಿಯಲ್ಲಿಲ್ಲ. ಎದ್ದು ನಡೆಯಲು ಪ್ರಯತ್ನಿಸಿದರೆ, ಅವರು ಬೀಳುತ್ತಾರೆ. ಹೀಗಾಗಿ ಅವರು ಯಾವುದೇ ಕೆಲಸಗಳನ್ನು ಮಾಡುವಂತಿಲ್ಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಸಂತೋಷ್ ತಾಯಿ ಬೀಡಿ ಕಟ್ಟುತ್ತಿದ್ದು, ಬೀಡಿಯಿಂದ ಬಂದ ಹಣದಿಂದ ಮೂವರ ಜೀವನ ಸಾಗಬೇಕಿದೆ. ಸಂತೋಷ್ ಅವರ ಪತ್ನಿಗೂ ಸಮಸ್ಯೆಗಳಿದ್ದು, ಮನೆಯಿಂದ ಹೊರಹೋಗಿ ದುಡಿಯದಂತಾಗಿದೆ. ಇದಲ್ಲದೇ ಈ ದಂಪತಿಗೆ ಮಕ್ಕಳು ಕೂಡ ಇಲ್ಲ. ಔಷಧಿ, ಮನೆಯ ಖರ್ಚು ವೆಚ್ಚಗಳು, ಇವೆಲ್ಲವೂ ತಾಯಿ ಕೇವಲ ಬೀಡಿ ಕಟ್ಟುವುದರಿಂದ ನಡೆಸುವಂತಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಈ ಕುಟುಂಬ ದಾನಿಗಳ ಸಹಾಯಕ್ಕಾಗಿ ಕಾಯುತ್ತಿದೆ.

ಸಂತೋಷ್ ಮತ್ತು ಅವರ ಅಸಹಾಯಕ ಕುಟುಂಬ


“ದುಡಿಯುತ್ತಿದ್ದ ಸಂದರ್ಭದಲ್ಲಿ ನಾನು ಕಟ್ಟಿಸಿದ ಮನೆಯೊಂದು ಬಿಟ್ಟರೆ, ಈಗ ನನ್ನ ಬಳಿ ಬೇರೇನೂ ಇಲ್ಲ. ಸ್ವಂತವಾಗಿ ದುಡಿದು ಜೀವನ ಸಾಗಿಸಬೇಕು ಅನ್ನೋ ಆಸೆ ಇದ್ದರೂ ದುಡಿಯಲು ಸಾಧ್ಯವಾಗುತ್ತಿಲ್ಲ.  ನನಗೆ ಹಣ ಕೊಡದಿದ್ದರೂ ಪರವಾಗಿಲ್ಲ, ಅಡಿಕೆ ಸುಲಿಯುವ ಯಂತ್ರವಾದರೂ ಯಾರಾದರೂ ದಾನ ಮಾಡಿದರೆ, ಅದರಿಂದ ಜೀವನ ಸಾಗಿಸುತ್ತೇನೆ’ ಎಂದು ಸಂತೋಷ್ ಮರುಗುತ್ತಲೇ ದಾನಿಗಳ ಸಹಕಾರ ಕೇಳುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ


ರೇಷನ್ ಅಕ್ಕಿಯನ್ನು  ಊಟ ಮಾಡಿಕೊಂಡು ಬದುಕುತ್ತಿರುವ ಸಂತೋಷ್ ಅವರ ಕುಟುಂಬ ಸಾಕಷ್ಟು ನೋವುಗಳನ್ನು ಉಂಡಿವೆ. ಮುಂದಿನ ಜೀವನ ಹೇಗೆ ಅನ್ನೋದು ತಿಳಿಯದೇ ಕಂಗಾಲಾಗಿದ್ದಾರೆ. ಇವರ ಕುಟುಂಬಕ್ಕೆ ನೆರವಾಗಲು ಸಾಧ್ಯವಾಗುವವರು ಸಂತೋಷ್ ಅವರನ್ನು 6360078960 ದೂರವಾಣಿ ಮೂಲಕ ಸಂಪರ್ಕಿಸ ಬಹುದಾಗಿದೆ.

ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬ ದಾನಿಗಳ ನೆರವಿನ ಭರವಸೆಯಿಂದ ಮಾತ್ರವೇ ಜೀವಿಸುತ್ತಿದೆ. ಇವರಿಗೆ ಜನರು ತಮ್ಮಿಂದಾದ ಸಹಾಯ ಮಾಡಬೇಕಿದೆ. ನೀವು ನೀಡುವ ಸಣ್ಣ ನೆರವು ಕೂಡ ಈ ಕುಟುಂಬಕ್ಕೆ ಆಧಾರವಾಗಬಲ್ಲದು ಹಾಗಾಗಿ ಸಂತೋಷ್ ಕುಟುಂಬದ ಜೊತೆಕ್ಕೆ ನೀವೂ ಕೂಡ ಜೊತೆಯಾಗಿ. ಅವರ ಭರವಸೆಯ ಜೀವನಕ್ಕೆ ನೆರವಿನ ಮೂಲಕ ವಿಶ್ವಾಸ ತುಂಬೋಣ…

ನೆರವು ನೀಡಲು ಬಯಸುವವರು ಸಂತೋಷ್ ಅವರ ಈ ಕೆಳಗಿನ ಬ್ಯಾಂಕ್ ಖಾತೆಗೆ ನೆರವು ನೀಡಬಹುದು.

Google Pay/ Phone Pay: 6360078960

Bank Name: Bank Of Baroda, Manjanady Kalkatta

Account Number: 70470100007375

IFSC Code: BARB0VJMADY 


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ