ಅನಾರೋಗ್ಯದಿಂದ ನೊಂದು ಪೊಲಿಯೋ ಪೀಡಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

ಬೈಂದೂರು: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಉಪ್ಪುಂದ ಗ್ರಾಮದ 71 ವರ್ಷದ ನಾರಾಯಣ ಪೂಜಾರಿ ಆತ್ಮಹತ್ಯೆಗೆ ಶರಣಾದ ವೃದ್ಧ. ಇವರು ಪೊಲೀಯೋ ಪೀಡಿತರಾಗಿದ್ದು, ಸುಮಾರು 2 ವರ್ಷದ ಹಿಂದೆ ಜಾರಿ ಬಿದ್ದ ಪರಿಣಾಮ ಬಲಕಾಲಿಗೆ ಆಪರೇಷನ್ ಆಗಿತ್ತು. ಆ ಬಳಿಕ ಸರಿಯಾಗಿ ನಡೆದಾಡಲು ಆಗುತ್ತಿರಲಿಲ್ಲ.
ಇದೇ ಕಾರಣದಿಂದ ಜೀವನದಲ್ಲಿ ಮಾನಸಿಕವಾಗಿ ನೊಂದು ಆ.6ರ ರಾತ್ರಿಯಿಂದ ಆ. 7ರಂದು ಬೆಳಿಗ್ಗೆ 7 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ತೋಟದಲ್ಲಿರುವ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka