ಒಂದೇ ಅನಾಥಾಶ್ರಮದ 210 ಮಂದಿಗೆ ಕೊರೊನಾ ಪಾಸಿಟಿವ್
30/05/2021
ದಕ್ಷಿಣಕನ್ನಡ: ಒಂದೇ ಅನಾಥಾಶ್ರಮದ 210 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ಜಿಲ್ಲೆಯ ಸಿಯೋನ್ ಅನಾಥಾಶ್ರಮದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ. ಈ ನಡುವೆ ಈ ಘಟನೆ ಜಿಲ್ಲೆಯ ಜನತೆಗೆ ಬಿಗ್ ಶಾಕ್ ನೀಡಿದೆ.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮದಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ 270 ಮಂದಿಯಿದ್ದು, ಅವರಲ್ಲಿ 210 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ರಜತಾದ್ರಿ ವಸತಿ ಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲಾಗಿದ್ದು, ಅನಾಥಾಶ್ರಮದ 210 ಕೋವಿಡ್ ಸೋಂಕಿತರಿಗೆ ರಜತಾದ್ರಿ ವಸತಿ ಗೃಹದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.